ಖೋಟಾನೋಟು ಜಾಲದಲ್ಲಿ ಪೆಟ್ರೋಲ್‌ ಬಂಕ್ ಮಾಲೀಕ!

7

ಖೋಟಾನೋಟು ಜಾಲದಲ್ಲಿ ಪೆಟ್ರೋಲ್‌ ಬಂಕ್ ಮಾಲೀಕ!

Published:
Updated:

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇರೆಗೆ ಜಾಲಹಳ್ಳಿಯ ಎಚ್.ಪಿ ಪೆಟ್ರೋಲ್ ಬಂಕ್ ಮಾಲೀಕ ಪ್ರಕಾಶ  ಹಾಗೂ ದೇವದುರ್ಗದ ಶಾಸಕರ ಹಿಂಬಾಲಕ ಅಯ್ಯಾಳಪ್ಪ ನಾಯಕ ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

‘ಸಿಂಧನೂರು ತಾಲ್ಲೂಕು ಬಸಾಪುರ ಕ್ಯಾಂಪ್ ನಿವಾಸಿ, ಸದ್ಯ ದೇವದುರ್ಗದ ನಗರಗುಂಡಾದಲ್ಲಿ ವಾಸಿಸುತ್ತಿರುವ ರೈತ ಶ್ರೀನಿವಾಸರೆಡ್ಡಿ ಅವರನ್ನು ಈಚೆಗೆ ಬಂಧಿಸಿ,  ₹500 ಮುಖಬೆಲೆಯ 8 ನೋಟು ಮತ್ತು ₹2,000 ಮುಖಬೆಲೆಯ 24 ನೋಟುಗಳನ್ನು ವಶಪ‍ಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬೆಂಗಳೂರಿನ ಅಬ್ದುಲ್ ರೆಹಮಾನ್, ಅಮ್ಜದ್, ದೇವದುರ್ಗದ ರವೀಂದ್ರ, ಮಾನ್ವಿ ತಾಲ್ಲೂಕು ಹುಸೇನ್ ನಗರ ಕ್ಯಾಂಪ್ ನಿವಾಸಿ ರಾಮಕೃಷ್ಣ, ತೆಲಂಗಾಣದ ಗದ್ವಾಲ್ ಜಿಲ್ಲೆಯ ಕುಚಿನೆರ್ಲಾದ ಹನುಮಂತ ಖೋಟಾನೋಟು ಜಾಲದಲ್ಲಿರುವ ಇತರೆ ಆರೋಪಿಗಳು’ ಎಂದು ಅವರು ಹೇಳಿದ್ದಾರೆ.

‘ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಖೋಟಾನೋಟುಗಳು ದೇವದುರ್ಗ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಚಲಾವಣೆಯಾಗಿವೆ’ ಎಂದು ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !