ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಟರ್‌ಹೆಡ್‌ ಫೋರ್ಜರಿ: ಗಾಬರಿ ಬಿದ್ದ ಸಚಿವರು!

Last Updated 15 ಅಕ್ಟೋಬರ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರೊಬ್ಬರ ಲೆಟರ್‌ ಹೆಡ್‌ ಫೋರ್ಜರಿ ಮಾಡಿ, 12 ಜನರಿಗೆ ತಲಾ ₹10 ಲಕ್ಷದಂತೆ ಸಾಲ ಸೌಲಭ್ಯ ನೀಡಬೇಕೆಂದು ಸಚಿವರಿಗೆ ಶಿಫಾರಸು ಮಾಡಿರುವ ಪ್ರಕರಣ ಬಯಲಿಗೆ ಬಂದಿದೆ.

ಫೋರ್ಜರಿ ಮಾಡಿದ ಲೆಟರ್‌ ಹೆಡ್‌ ನೋಡಿ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರೇ ಗಾಬರಿಗೊಳಗಾದ ಪ್ರಸಂಗ ವಿಧಾನಸೌಧದಲ್ಲಿ ಮಂಗಳವಾರ ನಡೆಯಿತು.

ಮಾಯಕೊಂಡ ಶಾಸಕ ಪ್ರೊ.ಎನ್‌.ಲಿಂಗಣ್ಣ ಅವರ ಲೆಟರ್‌ ಹೆಡ್‌ ಫೋರ್ಜರಿ ಆಗಿದೆ. ಸ್ವತಃ ಲಿಂಗಣ್ಣ ಅವರೇ ಕಾರಜೋಳ ಅವರಿಗೆ ಈ ಸಂಬಂಧ ದೂರು ನೀಡಿದರು.‘ನನ್ನ ಲೆಟರ್‌ ಹೆಡ್‌ ಪೋರ್ಜರಿ ಮಾಡಿದ್ದಾರೆ. ಅದನ್ನು ಮಾಡಿದ್ದು ಯಾರು ಎಂಬುದು ಗೊತ್ತಿಲ್ಲ. ಯಾರಿಗೂ ಈ ರೀತಿ ಶಿಫಾರಸು ಮಾಡಿ ಪತ್ರ ನೀಡಿಯೇ ಇಲ್ಲ’ ಎಂದು ಲಿಂಗಣ್ಣ ಅವರು ಅಳಲು ತೋಡಿಕೊಂಡರು.

‘ಈ ಬಗ್ಗೆ ದಾವಣಗೆರೆ ಪೊಲೀಸರಿಗೆ ತಕ್ಷಣವೇ ದೂರು ನೀಡಿ. ಅವರು ಫೋರ್ಜರಿ ಮಾಡಿದವರನ್ನು ಪತ್ತೆ ಹಚ್ಚಬಲ್ಲರು’ ಎಂದು ಕಾರಜೋಳ ಸಲಹೆ ನೀಡಿದರು.

‘ಶಾಸಕರ ಶಿಫಾರಸು ಪತ್ರ ಯಾರಾದರೂ ತಂದರೆ ಅದನ್ನು ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಲೆಟರ್‌ಹೆಡ್‌ ಫೋರ್ಜರಿ ಮಾಡಿ ತಂದರೆ ತಕ್ಷಣಕ್ಕೆ ಗೊತ್ತಾಗುವುದೂ ಇಲ್ಲ’ ಎಂದು ಸಚಿವರು ಹೇಳಿದರು.

ಫೋರ್ಜರಿ ಪತ್ರದಲ್ಲಿ ಏನಿದೆ?: 2019–20ನೇ ಸಾಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವತಿಯಿಂದ ಐಎಸ್‌ಬಿ ಯೋಜನೆ ಅಡಿ ಸಾಲ ಸೌಲಭ್ಯ ಮಂಜೂರು ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

‘ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಫಲಾನುಭವಿಗಳು ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರು ನನಗೆ ಪರಿಚಿತರಾಗಿದ್ದು, ನಿಗಮದ ವತಿಯಿಂದ ಗಾರ್ಮೆಂಟ್ಸ್‌ ಉದ್ದೇಶದಿಂದ ಸಾಲ ಸೌಲಭ್ಯ ನೀಡಬೇಕು’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT