ಗೇಟು ಬಿದ್ದು ನಾಲ್ಕು ವರ್ಷದ ಬಾಲಕಿ ಸಾವು

ಬುಧವಾರ, ಏಪ್ರಿಲ್ 24, 2019
33 °C

ಗೇಟು ಬಿದ್ದು ನಾಲ್ಕು ವರ್ಷದ ಬಾಲಕಿ ಸಾವು

Published:
Updated:

 

ಬೆಂಗಳೂರು: ತ್ಯಾಗರಾಜನಗರದಲ್ಲಿ ಕಬ್ಬಿಣದ ಗೇಟು ಬಿದ್ದು ನಾಲ್ಕು ವರ್ಷದ ಹುಡುಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅಜ್ಜಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗುರುವಾರ ಸಂಜೆ 7.10ಕ್ಕೆ ಘಟನೆ ನಡೆದಿದ್ದು ಕೃತಿ ಅರಸು ಮತ್ತು ತಂಗಿ ಧೃತಿ ಅಜ್ಜಿ ಮನೆಯಲ್ಲಿ ಆಡುತ್ತಿದ್ದಾಗ ನೆರೆ ಮನೆಯ ಗೇಟು ಕೃತಿಯ ಮೇಲೆ ಬಿದ್ದಿದೆ.  ತಲೆಗೆ ತೀವ್ರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ, ಗೇಟು ತುಂಬಾ ಹಳೆಯದೆಂದು ಪೊಲೀಸರು ತಿಳಿಸಿದ್ದಾರೆ

ಮಂಜುನಾಥ ಮತ್ತು ಶರ್ಮಿಳಾ ದಂಪತಿಗಳ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜಿ ಸುಬ್ಬಲಕ್ಷ್ಮಿಯವರ  ಮನೆಗೆ ಬಂದಿದ್ದರು. ಮಂಜುನಾಥ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ನೆರೆ ಮನೆಯ ಮುರಳಿಧರ್‌ ವಿರುದ್ದ ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !