ಪೋಲಿಯೊ ಲಸಿಕೆಯಲ್ಲಿ ವೈರಲ್‌ ಫೀವರ್‌ ಇದೆ ಎಂಬುದು ಸುಳ್ಳು ಸುದ್ದಿ

7
ಆರೋಗ್ಯ ಇಲಾಖೆ ಸ್ಪಷ್ಟನೆ

ಪೋಲಿಯೊ ಲಸಿಕೆಯಲ್ಲಿ ವೈರಲ್‌ ಫೀವರ್‌ ಇದೆ ಎಂಬುದು ಸುಳ್ಳು ಸುದ್ದಿ

Published:
Updated:

ಬೆಂಗಳೂರು: ಪೋಲಿಯೊ ಲಸಿಕೆಯಲ್ಲಿ ವೈರಸ್‌ ಇದೆ ಎಂಬ ಸುದ್ದಿಯೊಂದು ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಆರೋಗ್ಯ ಇಲಾಖೆ ಹೇಳಿದೆ.

‘ನಾಳೆ ಬರುವ ಪೋಲಿಯೊ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬಾರದು ಎಂದು ಕೇಳಿಕೊಳ್ಳುತ್ತೇ. ಕಾರಣ ಈ ಭಾರಿಯ ಪೋಲಿಯೊ ಹನಿಯಲ್ಲಿ ವೈರಲ್‌ ಫೀವರ್‌ ಕಂಡುಬರುತ್ತಿದೆ. ಈ ಸಂಬಂದ ಪೋಲಿಯೊ ಲಸಿಕೆ ತಯಾರಿಕಾ ಸಂಸ್ಥೆಯ ಮಾಲೀಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆದ್ದರಿಂದ, ಮುಂದಿನ ಅಪ್‌ಡೇಟ್‌ ಬರುವವರೆಗೆ ಯಾರು ತಮ್ಮ ಮಕ್ಕಳಿಗೆ ಪೋಲಿಯೊ ಹಾಕಿಸಬಾರದು ಎಂದು ಕೇಳಿಕೊಳ್ಳುತ್ತೇನೆ’ ಎಂದು ವ್ಯಕ್ತಿಯೊಬ್ಬ ಮಾತನಾಡಿರುವುದು ಆಡಿಯೊದಲ್ಲಿದೆ. ಇದು ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ.

ಇದನ್ನು ಪರಿಶೀಲಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಇದು ಸುಳ್ಳು ಸುದ್ದಿ, ಯಾವುದೇ ವೈರಲ್‌ ಫೀವರ್‌ ಇಲ್ಲ ಎಂದು ಹೇಳಿದ್ದಾರೆ.

ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಈ ಆಡಿಯೊದ ಮೂಲವನ್ನು ಪತ್ತೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !