ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟವಾಗದ ಬೆಳೆಯನ್ನು ಆಸ್ಪತ್ರೆಗೆ ನೀಡಿದ ರೈತ

Last Updated 9 ಮೇ 2020, 19:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಆಹಾರ ಸಿದ್ಧಪಡಿಸಲು ತರಕಾರಿ ಸರಿಯಾಗಿ ದೊರೆಯುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಗತಿಪರ ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆದಿದ್ದ 30 ಸಾವಿರ ಕೆಜಿ ಕ್ಯಾಬೇಜ್‌ ಅನ್ನು ಉಚಿತವಾಗಿ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲುವಿನ ಪ್ರಗತಿಪರ ರೈತ, ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ಚೀಫ್‌ ಆಪರೇಟಿಂಗ್‌ ಅಧಿಕಾರಿ ಲಕ್ಷ್ಮಣ ಟಿ.ಎಲ್‌ ಅವರೇ ಈ ಕಾರ್ಯ ಮಾಡಿದವರು.ಮಾರುಕಟ್ಟೆಗೆ ಸಾಗಿಸಲಾಗದಿದ್ದರೆ, ಹೊಲದಲ್ಲಿಯೇ ಕೊಳೆಯುತ್ತದೆ. ಅದರ ಬದಲಾಗಿ ಜನರನ್ನು ತಲುಪಲಿ ಎನ್ನುವ ಉದ್ದೇಶದಿಂದ ಆಸ್ಪತ್ರೆಗಳಿಗೆ ಉಚಿತವಾಗಿ ಕ್ಯಾಬೇಜ್‌ ನೀಡಲಾಯಿತು ಎನ್ನುತ್ತಾರೆ ಅವರು.

ಎರಡೂವರೆ ಎಕರೆಯಲ್ಲಿ ₹2.25 ಲಕ್ಷ ಖರ್ಚು ಮಾಡಿ ಕ್ಯಾಬೇಜ್‌ ಬೆಳೆದಿದ್ದರು. ಕೊರೊನಾದಿಂದಾಗಿ ಲಾಕ್‌ಡೌನ್‌ ಆಯಿತು. ನಂತರ ದಿನಗಳಲ್ಲಿ ಜನರು ತರಕಾರಿಗಾಗಿ ಪರದಾಡುವುದು ಲಕ್ಷ್ಮಣ ಅವರ ಗಮನಕ್ಕೆ ಬಂದಿತು. ಕೂಡಲೇ ಅಪೋಲೊ ಆಸ್ಪತ್ರೆಯ ಅಧ್ಯಕ್ಷ ದಿನೇಶ ಮಾಧವನ್‌ ಅವರ ನೆರವಿನೊಂದಿಗೆ ಬೆಂಗಳೂರಿನ ರಾಜೀವ್‌ಗಾಂಧಿ, ಜಯದೇವ, ವಿಕ್ಟೋರಿಯಾ, ನಿಮ್ಹಾನ್ಸ್‌ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಕ್ಯಾಬೇಜ್‌ ಪೂರೈಸಿದರು.ಇಸ್ಕಾನ್‌, ಗುರುದ್ವಾರಕ್ಕೂ ಕಳುಹಿಸಿದ್ದಾರೆ.

ಶಾಸಕರಾದ ಎನ್‌.ಎ. ಹ್ಯಾರಿಸ್‌, ರಾಮಲಿಂಗಾರಡ್ಡಿ ಅವರೂ ಇಲ್ಲಿನ ಕ್ಯಾಬೇಜ್‌ ತೆಗೆದುಕೊಂಡು ಹೋಗಿ ಕ್ಷೇತ್ರಗಳಲ್ಲಿ, ಚಿತ್ರನಟಿ ಸುಹಾಸಿನಿ ಅವರೂ, ಚನ್ನೈಗೆ 8 ಸಾವಿರ ಕೆಜಿ ತೆಗೆದುಕೊಂಡು ಹೋಗಿ ಹಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT