ಸಾಲ ಮನ್ನಾ: 2.30 ಲಕ್ಷ ರೈತರಿಂದ ಕ್ಲೇಮ್‌ಗಳು

7

ಸಾಲ ಮನ್ನಾ: 2.30 ಲಕ್ಷ ರೈತರಿಂದ ಕ್ಲೇಮ್‌ಗಳು

Published:
Updated:

ಬೆಂಗಳೂರು: ಸಹಕಾರ ಬ್ಯಾಂಕ್‌ ವಲಯದಲ್ಲಿ ಸಾಲಮನ್ನಾ ಯೋಜನೆಯಡಿ 2.30 ಲಕ್ಷ ರೈತರಿಂದ ಕ್ಲೇಮ್‌ಗಳು ಬಂದಿವೆ, ಇದರ ಒಟ್ಟು ಮೌಲ್ಯ ₹1050 ಕೋಟಿ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಸಾಲ ಪಡೆದ ರೈತರ ದತ್ತಾಂಶ ಸಂಗ್ರಹಿಸುವ ಪ್ರಕ್ರಿಯೆ ಮುಗಿದ ಬಳಿಕ ಹಣಕಾಸು ಇಲಾಖೆ ಬ್ಯಾಂಕ್‌ಗಳಿಗೆ ಹಣ ಬಿಡುಗಡೆ ಮಾಡಲಿದೆ. ಇನ್ನು 15 ದಿನಗಳಲ್ಲಿ ಹಣ ನೇರವಾಗಿ ಆಯಾ ಜಿಲ್ಲಾ ಡಿಸಿಸಿ ಬ್ಯಾಂಕ್‌ಗಳಿಗೆ ಜಮೆಯಾಗುತ್ತದೆ ಎಂದು ಹೇಳಿದರು.

ಬ್ಯಾಂಕ್‌ಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !