ಬಿಎಸ್‌ಸಿ ಓದುತ್ತೇನೆಂದ ಪುತ್ರಿಗೆ ಬೆಂಕಿ ಇಟ್ಟ ತಂದೆ!

ಮಂಗಳವಾರ, ಏಪ್ರಿಲ್ 23, 2019
33 °C

ಬಿಎಸ್‌ಸಿ ಓದುತ್ತೇನೆಂದ ಪುತ್ರಿಗೆ ಬೆಂಕಿ ಇಟ್ಟ ತಂದೆ!

Published:
Updated:

ಮಸ್ಕಿ (ರಾಯಚೂರು): ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಅಗ್ರಿ ಓದುತ್ತೇನೆ ಎಂದು ಹಠ ಹಿಡಿದ ಪುತ್ರಿಯನ್ನು ಕರೆದುಕೊಂಡು ಹೋಗಿದ್ದ ತಂದೆಯು ಸೀಮೆ ಎಣ್ಣೆ ಸುರಿದು ಸುಟ್ಟುಹಾಕಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸುಂಕನೂರು ಗ್ರಾಮದಲ್ಲಿ ನಡೆದಿದೆ. 

ನಂದಿನಿ (20) ಸುಟ್ಟು ಕರಕಲಾಗಿದ್ದು, ಗ್ರಾಮದ ಹೊರವಲಯ ಕಾಲುವೆ ಪಕ್ಕದ ಜಾಲಿಗಿಡಗಳ ಮಧ್ಯ ಸೋಮವಾರ ಬೆಳಿಗ್ಗೆ ಶವ ಪತ್ತೆಯಾಗಿದೆ. 

ಆರೋಪಿ ತಂದೆ ನಾರಾಯಣರೆಡ್ಡಿ ಕೊಂಕಲದ ವಿರುದ್ಧ ಪತ್ನಿಯು ಬಳಗಾನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಯುಸಿ ವಿಜ್ಞಾನ ಓದು ಪೂರ್ಣಗೊಳಿಸಿದ್ದ ನಂದಿನಿ ಬಿಎಸ್‌ಸಿಗೆ ಸೇರಿಕೊಳ್ಳಲು ಬಯಸಿದ್ದಳು. ಆದರೆ, ನಾರಾಯಣರೆಡ್ಡಿ ನಿರಾಕರಣೆ ಮಾಡುತ್ತಾ ಬಂದಿದ್ದರು. ಅರ್ಜಿ ಹಾಕಿ ಬರೋಣ ಎಂದು ಮಗಳಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿ ಈ ರೀತಿ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !