23ರಿಂದ ಅಭಿವೃದ್ಧಿ ಸಂವಾದ

7

23ರಿಂದ ಅಭಿವೃದ್ಧಿ ಸಂವಾದ

Published:
Updated:

ಬೆಂಗಳೂರು: ಮೇಲುಕೋಟೆಯ ‘ಹೊಸ ಜೀವನ ದಾರಿ’ ಕೇಂದ್ರದಲ್ಲಿ ಫೆ. 23 ಮತ್ತು 24ರಂದು ‘ಅಭಿವೃದ್ಧಿ ಸಂವಾದ – 2019’ ಶಿಬಿರವನ್ನು ಆಯೋಜಿಸಲಾಗಿದೆ.

ಜನಪದ ಸೇವಾ ಟ್ರಸ್ಟ್‌ ಆಯೋಜಿಸಿರುವ ಈ ಶಿಬಿರದಲ್ಲಿ ‘ಅಭಿವೃದ್ಧಿಯ ರಾಜಕೀಯ ಪರಿಕಲ್ಪನೆ’ ಎಂಬ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಸಂವಾದಗಳು ನಡೆಯಲಿವೆ.

ಚಿಂತಕ, ಲಕ್ಷ್ಮೀಶ ತೋಳ್ಪಾಡಿ, ಅರ್ಥಶಾಸ್ತ್ರಜ್ಞ ಎಂ.ಎಸ್. ಶ್ರೀರಾಮ್‌, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಪ್ರಾಧ್ಯಾಪಕ ಸುಜಿತ್ ಸಿನ್ಹ ಮತ್ತು ಮಾಜಿ ಶಾಸಕ ಬಿ.ಆರ್. ಪಾಟೀಲ್‌ ಭಾಗವಹಿಸಿ ತಮ್ಮ ವಿಚಾರ ಮಂಡಿಸಲಿದ್ದಾರೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ. ನಾರಾಯಣ ಈ ಶಿಬಿರದ ನಿರ್ದೇಶಕರು. ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸಬಹುದು.

ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ: ಫೆ. 15. ಮೊದಲು ಬಂದ 25 ಜನರಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ: 8618770716/ 9945290163

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !