‘ಜುಲೈ 20ರಿಂದ ವಾಣಿಜ್ಯ ಸೇವೆ ವಾಹನಗಳ ಸಂಚಾರ ಸ್ಥಗಿತ’

7

‘ಜುಲೈ 20ರಿಂದ ವಾಣಿಜ್ಯ ಸೇವೆ ವಾಹನಗಳ ಸಂಚಾರ ಸ್ಥಗಿತ’

Published:
Updated:
ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್‌ ಪದಾಧಿಕಾರಿಗಳು ಬೇಡಿಕೆಗಳ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದರು.

ಬೆಂಗಳೂರು: ಅಖಿಲ ಭಾರತ ಮೋಟಾರು ಟ್ರಾನ್ಸ್‌‌ಪೋರ್ಟ್ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಕೈಗೊಂಡಿರುವ ನಿರ್ಣಯದಂತೆ ಇದೇ 20ರಿಂದ ಅನಿರ್ದಿಷ್ಟ ಕಾಲ ರಾಷ್ಟದಾದ್ಯಂತ ವಾಣಿಜ್ಯ ಸೇವೆಗಳ ವಾಹನಗಳ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಈ ವಿಷಯವನ್ನು ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಸಭೆಯಲ್ಲಿ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದರು.

ಸಮ್ಮಿಶ್ರ ಸರ್ಕಾರ ಬಜೆಟ್‌ನಲ್ಲಿ ಡೀಸೆಲ್ ದರ ಕಡಿತಗೊಳಿಸುವ ಬದಲು ಸುಂಕ ಹೆಚ್ಚಿಸಿರುವುದನ್ನ ಸಭೆ ತೀವ್ರವಾಗಿ ಖಂಡಿಸಿದೆ.

ಬೇಡಿಕೆಗಳು ಏನು?

* ಇಂಧನ ದರ ಇಳಿಕೆ, ರಾಷ್ಟ್ರವ್ಯಾಪಿ ಏಕರೂಪ ದರ ನಿಗದಿ ಹಾಗೂ ತ್ರೈಮಾಸಿಕ ಪರಿಶೀಲನಾ ಪದ್ಧತಿ ಜಾರಿಗೆ ಆಗ್ರಹಿಸಿ ಮತ್ತು ಟೋಲ್ ಮುಕ್ತ ಭಾರತಕ್ಕೆ ಒತ್ತಾಯ.

* ಥರ್ಡ್ ಪಾರ್ಟಿ ವಿಮಾ ಪಾಲಿಸಿ ದರ ಕಡಿತಗೊಳಿಸುವುದು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವುದು.

* ಟಿ.ಡಿ.ಎಸ್ ರದ್ದುಗೊಳಿಸುವುದು. ಪೂರ್ವಭಾವಿ ಆದಾಯ(ಆದಾಯ ತೆರಿಗೆ ನಿಯಮ 44ಎ ಇ) ಕಾಯ್ದೆ ಪರಿವರ್ತಿಸಲು ಆಗ್ರಹ.

* ಇ-ವೇ ಬಿಲ್ ಕುರಿತ ಸಮಸ್ಯೆ ಬಗೆಹರಿಸಲು ಒತ್ತಾಯ.

*ಪ್ರವಾಸಿ ವಾಹನ ಹಾಗೂ ಬಸ್‌ಗಳಿಗೆ ರಾಷ್ಟ್ರೀಯ ಪರವಾನಗಿ ನೀಡಲು ಒತ್ತಾಯ.

* ಜವಾಹರ ಲಾಲ್ ನೆಹರೂ ಪೋರ್ಟ್ ಟ್ರಸ್ಟ್ ( ಜೆಎನ್‌ಪಿಟಿ) ನೂತನವಾಗಿ ಪ್ರಕಟಿಸಿರುವ ನೇರ ಪೋರ್ಟ್ ಡೆಲಿವರಿ (ಡಿಪಿಡಿ) ಪದ್ಧತಿ ರದ್ದುಗೊಳಿಸಬೇಕು.

* ಬಂದರುಗಳಲ್ಲಿನ ದಟ್ಟಣೆ ಸುಗಮಗೊಳಿಸಬೇಕು.
**
ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಎಚ್.ಡಿ‌. ಕುಮಾರಸ್ವಾಮಿ ಜತೆ ಇದೇ 12ರಂದು ಮಾತುಕತೆ ನಡೆಯಲಿದೆ. ಮಾತುಕತೆಯಲ್ಲಿ ಲಾರಿ, ಪ್ರವಾಸಿ ವಾಹನ, ಮ್ಯಾಕ್ಸಿ ಕ್ಯಾಬ್, ಬಸ್, ಟೆಂಪೊ, ಸಾಗಣೆದಾರರ ಒಕ್ಕೂಟದ ಪರವಾಗಿ ಈ ಕೆಳಗಿನ ಅಂಶಗಳ ಕುರಿತು ಮನವಿ ಸಲ್ಲಿಸಲಾಗುವುದು.

* ಅಧಿಕ ತೆರಿಗೆ ಕಡಿತಗೊಳಿಸಿ.

* ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚುತ್ತಿರುವ ಶೋಷಣೆ ತಡೆಯಿರಿ.

* ಮರಳು-ಜಲ್ಲಿ ಸಾಗಣೆ ಪರ್ಮಿಟ್ ನೀಡಲು ಒತ್ತಾಯ.

* ಟ್ರಕ್ ಟರ್ಮಿನಲ್ ನಿರ್ಮಾಣ.

* ಚಾಲಕರಿಗಾಗಿ ಕ್ಯಾಂಟೀನ್ ನಿರ್ಮಾಣ

* ನೆರೆ ರಾಜ್ಯದ ಅತಿ ಉದ್ದದ ಟ್ರೇಲರ್ ಗಳಿಗೆ ದಂಡ ವಿಧಿಸಬೇಕು.

* ಚಾಲಕರ ನಿಧಿ ಸ್ಥಾಪಿಸಬೇಕು.

* ರಸ್ತೆ ಸುರಕ್ಷತೆ.

* ವೇಗ ನಿಯಂತ್ರಕ ನಿರ್ಧಾರ ಹಿಂಪಡೆಯಬೇಕು.

* ಪ್ರವಾಸಿ ವಾಹನಗಳ ಸುಗಮ ಸಂಚಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !