ಬೆಂಗಳೂರು ವಿ.ವಿ ಶುಲ್ಕ ಪಾವತಿ: ಮೇ1 ರಿಂದ ಆನ್‌ಲೈನ್‌

ಶನಿವಾರ, ಏಪ್ರಿಲ್ 20, 2019
29 °C

ಬೆಂಗಳೂರು ವಿ.ವಿ ಶುಲ್ಕ ಪಾವತಿ: ಮೇ1 ರಿಂದ ಆನ್‌ಲೈನ್‌

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೇ 1 ರಿಂದ ಎಲ್ಲ ರೀತಿಯ ಶುಲ್ಕಗಳನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು.

ಇದರಿಂದಾಗಿ ಡಿಡಿ ಮೂಲಕ ಶುಲ್ಕವನ್ನು ಪಾವತಿಸುವ ಪದ್ಧತಿ ಏಪ್ರಿಲ್‌ 30 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಕಡ್ಡಾಯವಾಗಿದೆ. ಆದ್ದರಿಂದ, ಎಲ್ಲ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು, ನಿರ್ದೇಶಕರು, ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಸಂಯೋಜಕರು, ಮುಖ್ಯಸ್ಥರು ಮತ್ತು ವಿಶ್ವವಿದ್ಯಾಲಯ ಸಂವಿಧಾನ ಕಾಲೇಜುಗಳ ಪ್ರಾಂಶುಪಾಲರು ತಮ್ಮ ತಮ್ಮ ಕಾಲೇಜು ಮತ್ತು ವಿಭಾಗಗಳಲ್ಲಿ ಆನ್‌ಲೈನ್‌ ಮೂಲಕ ಶುಲ್ಕಗಳನ್ನು ಪಾವತಿಸುವ ಪದ್ಧತಿಯ ಬಗ್ಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮತ್ತು ಪೋಷಕರ ಗಮನಕ್ಕೆ ತರಬೇಕು ಎಂದು ಕುಲಸಚಿವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್‌ www.bangaloreuniversity.ac.in ನಲ್ಲಿ ಆನ್‌ಲೈನ್‌ ಸೇವೆ ಆಯ್ಕೆ ಮಾಡಿಕೊಳ್ಳಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಪರೀಕ್ಷಾ ವಿಭಾಗದ ಶುಲ್ಕಗಳಿಗೆ ಪರೀಕ್ಷಾ ವಿಭಾಗವನ್ನು ಮತ್ತು ಇತರೆ ಶುಲ್ಕಗಳಿಗೆ ಆಡಳಿತ ಕಚೇರಿಯ ಹಣಕಾಸು ವಿಭಾಗದ ಆನ್‌ಲೈನ್‌ (ಡಿಡಿ) ಶಾಖೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !