ಗರ್ಭಪಾತಕ್ಕೆ ಕೋರಿ ಅರ್ಜಿ ಪರಿಶೀಲನೆಗೆ ಸೂಚನೆ

7

ಗರ್ಭಪಾತಕ್ಕೆ ಕೋರಿ ಅರ್ಜಿ ಪರಿಶೀಲನೆಗೆ ಸೂಚನೆ

Published:
Updated:

ಬೆಂಗಳೂರು: ‘ಭ್ರೂಣದ ಬೆಳವಣಿಗೆ ನ್ಯೂನತೆಯಿಂದ ಕೂಡಿರುವ ಕಾರಣ ಗರ್ಭಪಾತಕ್ಕೆ ಅವಕಾಶಕೊಡಬೇಕು’ ಎಂದು ಕೋರಿ ಮಹಿಳೆಯೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನಗರದ 29 ವರ್ಷದ ಮಹಿಳೆ ಸಲ್ಲಿಸಿರುವ ಈ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆಗೆ ಅಂಗೀಕರಿಸಿದೆ. ಅರ್ಜಿ ಮಾನ್ಯ ಮಾಡಿದ ನ್ಯಾಯಪೀಠ, ‘ತಕ್ಷಣವೇ ಈ ಕುರಿತು, ವೈದ್ಯಕೀಯ ಸೂಪರಿಂಟೆಂಡೆಂಟ್‌ ನೇತೃತ್ವದಲ್ಲಿ ವಾಣಿ ವಿಲಾಸ ಆಸ್ಪತ್ರೆಯ ತಜ್ಞ ವೈದ್ಯರ ತಂಡ ರಚಿಸಬೇಕು ಮತ್ತು ಡಿ.14ರ ಬೆಳಿಗ್ಗೆ 11ಕ್ಕೆ ಮಹಿಳೆಯ ಪರೀಕ್ಷೆ ನಡೆಸಿ, ವರದಿ ನೀಡಲು ಸೂಚಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !