ಬುಧವಾರ, ಏಪ್ರಿಲ್ 1, 2020
19 °C

ಬಾಲಕಿಗೆ ಆರ್ಥಿಕ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ನಗರದ ವಿದ್ಯಾನಗರ ಬಡಾವಣೆಯಲ್ಲಿ ಈಚೆಗೆ ಹುಚ್ಚುನಾಯಿ ದಾಳಿಗೆ ತುತ್ತಾಗಿ, ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾದ 7 ವರ್ಷದ ಬಾಲಕಿ ವಿಧಿಶಾಳಿಗೆ ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸೋಮವಾರ ಆರ್ಥಿಕ ನೆರವು ನೀಡಲಾಯಿತು.

ಸಮಿತಿ ಸದಸ್ಯರು ನೀಡಿದ ದೇಣಿಗೆ ₹ 35,101ನ್ನು ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ ಬಾಲಕಿಗೆ ಹಸ್ತಾಂತರಿಸಿದರು.

ಹುಚ್ಚುನಾಯಿ ದಾಳಿಗೆ ತುತ್ತಾಗಿದ್ದ ವಿಧಿಶಾಳ ಎಡಭಾಗದ ಕೆನ್ನೆಯ ಭಾಗ ಗಂಭೀರವಾಗಿ ಗಾಯಗೊಂಡಿತ್ತು. ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಳು. ವಿಧಿಶಾ ತಂದೆ ಪ್ರದೀಪ್ ಮಗಳಿಗೆ ಚಿಕಿತ್ಸೆ ಕೊಡಿಸಲಿಕ್ಕಾಗಿ ಹಣ ಹೊಂದಿಸಲು ಸಾಲ ಮಾಡಿದ್ದು, ಸಮಿತಿ ಗಮನಕ್ಕೆ ಬಂದಿದ್ದರಿಂದ ಈ ಆರ್ಥಿಕ ನೆರವು ನೀಡಲಾಗಿದೆ ಎಂದು ಸಮಿತಿ ಅಧ್ಯಕ್ಷ ರೇವಣ್ಣ ತಿಳಿಸಿದರು.

ಸಮಿತಿಯ ಗಣೇಶ್‍ಮೂರ್ತಿ, ಯೋಗ ಗುರು ಪ್ರಕಾಶ್, ಯೋಗ ಶಿಕ್ಷಕರಾದ ಚಂದ್ರಶೇಖರ್, ನಾಗೇಂದ್ರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)