‘ ನಮ್ಮ ದೇಶದ ಕೃಷಿ ಉತ್ಪನ್ನಗಳು ದಾಖಲೆಯ ಪ್ರಮಾಣಕ್ಕೆ ಏರಿದೆ. 2016–17ನೇ ಸಾಲಿನಲ್ಲಿ 2.75 ಕೋಟಿ ಟನ್ ಆಹಾರ ಉತ್ಪನ್ನ ಹಾಗೂ ಸುಮಾರು 3ಕೋಟಿ ಟನ್ ಹಣ್ಣು ಮತ್ತು ತರಕಾರಿಗಳನ್ನು ಬೆಳೆದಿದ್ದೇವೆ. ಇಷ್ಟು ದಾಖಲೆ ಪ್ರಮಾಣದ ಬೆಳೆ ಬೆಳೆಯುತ್ತಿರುವ ನಮ್ಮ ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಸರ್ಕಾರ ಸಿದ್ಧವಾಗಿದೆ’ ಎಂದ ಜೇಟ್ಲಿ, ಕೃಷಿಯನ್ನು ಕೂಡ ಉದ್ಯಮ ಎಂದು ಸರ್ಕಾರ ಪರಿಗಣಿಸಿದೆ‘ ಎಂದರು. ’2022ರಂದು ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ ದೇಶದ ಎಲ್ಲಾ ರೈತರ ಆದಾಯ ದುಪ್ಪಟ್ಟು ಆಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದ್ದು, ಇದರಿಂದಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.