ಭಾನುವಾರ, ಮಾರ್ಚ್ 7, 2021
28 °C

ಕದ್ರಾ ಅಣೆಕಟ್ಟೆಯಿಂದ 31 ಸಾವಿರ ಕ್ಯುಸೆಕ್ ನೀರು ನದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಮಲೆನಾಡಿನಲ್ಲಿ ಮಳೆ ಮುಂದುವರಿದಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕಾಳಿ ನದಿಗೆ ಕಟ್ಟಲಾಗಿರುವ ಕದ್ರಾ ಅಣೆಕಟ್ಟೆ ಭರ್ತಿಯಾಗಿದ್ದು, ಭಾನುವಾರ ಸಂಜೆ ಒಟ್ಟು 31 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. 

34.50 ಮೀಟರ್ ಎತ್ತರದ (13.74 ಟಿಎಂಸಿ ಅಡಿ) ಅಣೆಕಟ್ಟೆಯಲ್ಲಿ ಭಾನುವಾರ 33.70 ಮೀಟರ್ ನೀರು ಸಂಗ್ರಹವಾಗಿದೆ.  ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಒಳಹರಿವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹಾಗಾಗಿ ಅಣೆಕಟ್ಟೆಯ ಎಂಟು ಗೇಟ್‌ಗಳ ಪೈಕಿ ಐದರಿಂದ 10 ಸಾವಿರ ಕ್ಯುಸೆಕ್ ಹಾಗೂ ವಿದ್ಯುತ್ ಉತ್ಪಾದಿಸಿ 21 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಸಂಜೆ 4 ಗಂಟೆಯ ವೇಳೆಗೆ ಅಣೆಕಟ್ಟೆಯ ಒಳಹರಿವು 46 ಸಾವಿರ ಕ್ಯುಸೆಕ್ ಇತ್ತು.

ಜೊಯಿಡಾ ಭಾಗದಲ್ಲಿ ಕೂಡ ಜೋರಾಗಿ ಮಳೆಯಾಗುತ್ತಿರುವ ಕಾರಣ ಸೂಪಾ ಅಣೆಕಟ್ಟೆಗೂ ಭಾರಿ ಒಳಹರಿವು ಬರುತ್ತಿದೆ. ಶನಿವಾರ ಬೆಳಿಗ್ಗೆ 8ರಿಂದ ಭಾನುವಾರ ಬೆಳಿಗ್ಗೆ 8ರ ಅವಧಿಯಲ್ಲಿ ಅಣೆಕಟ್ಟೆಗೆ ಒಂದು ಮೀಟರ್ ನೀರು ಹರಿದು ಬಂದಿದೆ. 564 ಮೀಟರ್ ಎತ್ತರದ ಈ ಅಣೆಕಟ್ಟೆ ಭರ್ತಿಯಾಗಲು ಇನ್ನೂ 15.4 ಮೀಟರ್ ನೀರು ಸಂಗ್ರಹವಾಗಬೇಕಿದೆ.

ಉಳಿದಂತೆ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳಲ್ಲಿ ದಿನವಿಡೀ ಬಿರುಸಾದ ಮಳೆ ಸುರಿಯಿತು. ಕರಾವಳಿಯಲ್ಲಿ ಆಗಾಗ ರಭಸದ ಗಾಳಿಯೂ ಜೊತೆಯಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.