ಬಿಚ್ಚಿಕೊಳ್ಳದ ರಾಷ್ಟ್ರಧ್ವಜ; ಕೆಳಗಿಳಿಸಿ ಹಾರಿಸಿದರು!

7

ಬಿಚ್ಚಿಕೊಳ್ಳದ ರಾಷ್ಟ್ರಧ್ವಜ; ಕೆಳಗಿಳಿಸಿ ಹಾರಿಸಿದರು!

Published:
Updated:
Deccan Herald

ಬೆಳಗಾವಿ: ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ 72ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಧ್ವಜಾರೋಹಣ ಮಾಡಿದಾಗ ರಾಷ್ಟ್ರಧ್ವಜ ತೆರೆದುಕೊಳ್ಳಲಿಲ್ಲ. ತಕ್ಷಣ ಕೆಳಗಿಳಿಸಿ, ಧ್ವಜಕ್ಕೆ ಕಟ್ಟಲಾಗಿದ್ದ ಗಂಟು ಬಿಚ್ಚಿ ಹಾರಿಸಲಾಯಿತು.

ನಿಗದಿಯಂತೆ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಆರಂಭಗೊಂಡಿತು. ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆ ಸಚಿವರು ವೇದಿಕೆ ಮೇಲೇರಿದರು. ಸ್ತಂಭಕ್ಕೆ ಕಟ್ಟಿದ್ದ ಧ್ವಜದ ಹಗ್ಗವನ್ನು ಹಿಡಿದು ಎಳೆದರು. ರಾಷ್ಟ್ರಗೀತೆ ಆರಂಭಗೊಂಡಿತು. ಆದರೆ, ಧ್ವಜ ತೆರೆದುಕೊಳ್ಳಲಿಲ್ಲ.

ತಕ್ಷಣ ಪೊಲೀಸ್‌ ಅಧಿಕಾರಿಯೊಬ್ಬರು ಬಂದು, ಧ್ವಜವನ್ನು ಕೆಳಗಿಸಿದರು. ಬಿಗಿಯಾಗಿ ಕಟ್ಟಿದ್ದ ಹಗ್ಗದ ಗಂಟನ್ನು ಸಡಿಲುಗೊಳಿಸಿದರು. ಧ್ವಜವನ್ನು ಬಿಚ್ಚಿ, ಹಾರಿಸಿದರು. ನಂತರ ಧ್ವಜವನ್ನು ಮೇಲಕ್ಕೆ ಏರಿಸಿ, ಕಟ್ಟಲಾಯಿತು. ಅಷ್ಟರಲ್ಲಿ ರಾಷ್ಟ್ರಗೀತೆ ಕೊನೆಗೊಂಡಿತ್ತು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ, ಉತ್ತರ ವಲಯದ ಐಜಿಪಿ ಅಲೋಕಕುಮಾರ್‌, ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ, ಉಪಸ್ಥಿತರಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 2

  Frustrated
 • 2

  Angry

Comments:

0 comments

Write the first review for this !