ಹತ್ತಿರ ಬಂದ ವಿಮಾನಗಳು; ತಪ್ಪಿದ ಭಾರಿ ಅನಾಹುತ

7

ಹತ್ತಿರ ಬಂದ ವಿಮಾನಗಳು; ತಪ್ಪಿದ ಭಾರಿ ಅನಾಹುತ

Published:
Updated:

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಾರಾಟ ವಲಯದಲ್ಲಿ (ಏರ್‌ ಸ್ಪೇಸ್‌) ಎರಡು ಇಂಡಿಗೊ ವಿಮಾನಗಳು ಮುಖಾಮುಖಿ ಆಗುವುದು ಸ್ಪಲ್ಪದರಲ್ಲೇ ತಪ್ಪಿದೆ.

ಮಂಗಳವಾರ (ಜುಲೈ 10) ಕೇವಲ 200 ಅಡಿ ಅಂತರದಲ್ಲೇ ವಿಮಾನಗಳು ಹಾರಾಡಿದ್ದವು. ಅದರ ಫೈಲಟ್‌ಗಳು ಸಮಯ ಪ್ರಜ್ಞೆಯಿಂದ ಅಂತರ ಹೆಚ್ಚಿಸಿಕೊಂಡು ಅನಾಹುತ ತಪ್ಪಿಸಿದ್ದಾರೆ. ಆ ಘಟನೆ ವಿವರ ಇಲ್ಲಿದೆ.

ವಿಮಾನ – 1

ಇಂಡಿಗೊ 6ಇ- 6505 (ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿತ್ತು)

ಭೂಮಿಯಿಂದ 27,500 ಅಡಿ ಎತ್ತರಲ್ಲಿ ಹಾರಾಡುತ್ತಿತ್ತು

ಅನಾಹುತ ತಪ್ಪಿಸಲು 28,000 ಅಡಿಯಲ್ಲಿ ಹಾರಾಟ

‌ವಿಮಾನದಲ್ಲಿದ್ದ ಪ್ರಯಾಣಿಕರು 166

ವಿಮಾನ – 2 

ಇಂಡಿಗೊ 6ಇ–779

(ಕೊಯಿಮತ್ತೂರಿನಿಂದ ಹೈದರಾಬಾದ್‌ಗೆ ಹೊರಟಿತ್ತು)

 ಭೂಮಿಯಿಂದ 27,300 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು

 ವಿಮಾನದಲ್ಲಿದ್ದ ಪ್ರಯಾಣಿಕರು 162 

 ಅನಾಹುತ ತಪ್ಪಿಸಲು 36,000 ಅಡಿಗೆ ಹಾರಿತು

 * ಎರಡು ವಿಮಾನಗಳ ನಡುವೆ ಮೊದಲಿದ್ದ ಅಂತರ – 200 ಅಡಿ 

ಅನಾಹುತ ತಪ್ಪಿದ್ದು ಹೀಗೆ

* ವಿಮಾನಗಳು ಮುಖಾಮುಖಿ ಆಗುತ್ತಿದ್ದ ಬಗ್ಗೆ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಅಧಿಕಾರಿಗಳಿಗೆ ಗೊತ್ತಾಗಿತ್ತು.

* ಎರಡೂ ವಿಮಾನಗಳ ಫೈಲಟ್‌ಗಳಿಗೆ ತುರ್ತು ಸಂದೇಶ ರವಾನೆಯಾಯಿತು.

* ತಕ್ಷಣ ಎಚ್ಚೆತ್ತ ಫೈಲಟ್‌ಗಳು ಅಂತರ ಹೆಚ್ಚಿಸಿಕೊಂಡರು

ವರದಿ ಪಡೆದ ಡಿಜಿಸಿಎ

ಈ ಕುರಿತು ಇಂಡಿಗೊ ಕಂಪನಿಯಿಂದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವರದಿ ಪಡೆದುಕೊಂಡಿದೆ. ವಿಮಾನ ಅಪಘಾತ ತನಿಖಾ ತಂಡ (ಎಎಐಬಿ) ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ.

ನಿಲ್ದಾಣ ಅಧಿಕಾರಿಗಳ ಸ್ಪಷ್ಟನೆ

ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿಲ್ಲ. ಬೇರೆ ಕಡೆ ಘಟನೆ ನಡೆದಿರುವ ಮಾಹಿತಿ ಇದ್ದು, ಅದು ಎಎಐಬಿ ತನಿಖೆಯಿಂದಲೇ ಗೊತ್ತಾಗಬೇಕು – ನಿಲ್ದಾಣದ ಪ್ರತಿನಿಧಿ 

ವಿಮಾನಗಳು ಮುಖಾಮುಖಿಯಾದ ಘಟನೆಗಳು

* ಮುಂಬೈ ನಿಲ್ದಾಣ ಬಳಿ ಫೆಬ್ರುವರಿ 7ರಂದು 152 ಪ್ರಯಾಣಿಕರಿದ್ದ ವಿಸ್ತ್ರಾ ವಿಮಾನ ಹಾಗೂ 109 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನಗಳು 100 ಅಡಿ ಅಂತರದಲ್ಲಿ ಹಾರಾಡಿ ಮುಖಾಮುಖಿ ಆಗುವುದರಲ್ಲಿದ್ದವು. ಕೂಡಲೇ ಅಂತರ ಹೆಚ್ಚಿಸಿಕೊಂಡಿದ್ದರಿಂದ ಅನಾಹುತ ತಪ್ಪಿತ್ತು.

* ಬಾಂಗ್ಲಾದೇಶ ಗಡಿಯಲ್ಲಿ ಇಂಡಿಗೊ ಹಾಗೂ ಏರ್‌ ಡೆಕ್ಕನ್ ವಿಮಾನಗಳು ಮುಖಾಮುಖಿ ಆಗುವುದರಲ್ಲಿದ್ದವು. ಏರ್‌ ಟ್ರಾಫಿಕ್‌ ಕಂಟ್ರೋಲ್‌ ಅಧಿಕಾರಿಗಳ ಎಚ್ಚರಿಕೆಯಿಂದ ಅನಾಹುತ ತಪ್ಪಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !