ಮಂಗಳವಾರ, ಅಕ್ಟೋಬರ್ 15, 2019
29 °C
ಮನೆ ಹಾನಿ: ಪರಿಹಾರ ನಿಯಮ ಬದಲು

ಪ್ರವಾಹ| ಶೇ 25ಕ್ಕಿಂತ ಹೆಚ್ಚು ಹಾನಿಯಾದರೆ ₹5 ಲಕ್ಷ ಪರಿಹಾರಕ್ಕೆ ನಿರ್ಧಾರ: ಅಶೋಕ್

Published:
Updated:
Prajavani

ಬೆಂಗಳೂರು: ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿದ್ದು, ಶೇ 25ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದರೆ ₹5 ಲಕ್ಷ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ಮನೆಗಳ ಹಾನಿ ಪ್ರಮಾಣವನ್ನು ಹಿಂದೆ ನಾಲ್ಕು ಹಂತಗಳಲ್ಲಿ ವರ್ಗೀಕರಿಸಿ ಪರಿಹಾರದ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಆದರೆ ಈಗ ಎರಡು ಹಂತಕ್ಕೆ ಸೀಮಿತಗೊಳಿಸಿ ಹೆಚ್ಚು ಜನರಿಗೆ ಪರಿಹಾರ ಸಿಗುವಂತೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ವಿಧಾನ ಪರಿಷತ್‌ನಲ್ಲಿ ಪ್ರಕಟಿಸಿದರು.

ಶೇ 25ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದರೆ ₹5 ಲಕ್ಷ, ಶೇ 15ರಿಂದ 25ರಷ್ಟು ಹಾನಿಗೊಂಡಿದ್ದರೆ ₹25 ಸಾವಿರದ ಬದಲಾಗಿ ₹50 ಸಾವಿರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಶೇ 25ರಿಂದ 75ರಷ್ಟು ಹಾನಿಯಾಗಿದ್ದರೆ ₹1 ಲಕ್ಷ, ಶೇ 75ಕ್ಕಿಂತ ಹೆಚ್ಚು ಹಾನಿಗೊಂಡಿದ್ದರೆ ₹5 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿತ್ತು.

ಈಗ ನಿಯಮ ಸಡಿಲಿಸಲಾಗಿದೆ. ಜತೆಗೆ ದಾಖಲೆಗಳು ಇಲ್ಲದೆ ಹಾನಿಗೆ ತುತ್ತಾಗಿರುವ ಮನೆಗಳಿಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

Post Comments (+)