ಬುಧವಾರ, ಅಕ್ಟೋಬರ್ 16, 2019
28 °C

ಸವದಿಗೆ ₹180 ಎಂಒ ಮಾಡಿದ ರೈತರಿಂದ ‘ಅನುಕಂಪ, ಆಕ್ರೋಶ’!

Published:
Updated:
Prajavani

ಬೆಳಗಾವಿ: ‘ರೈತರು ಕೇಳಿದಷ್ಟು ಬೆಳೆ ಹಾನಿ ಪರಿಹಾರ ಕೊಡಲಾಗುವುದಿಲ್ಲ. ನನ್ನದೂ 100 ಎಕರೆ ಬೆಳೆ ಹಾನಿಗೊಳಗಾಗಿದ್ದು, ಎಕರೆಗೆ ₹ 1 ಲಕ್ಷ ಕೊಟ್ಟರೆ ನಾನೇ ₹ 1 ಕೋಟಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಲಕ್ಷಣ ಸವದಿ ನೀಡಿರುವ ಹೇಳಿಕೆಯನ್ನು ಖಂಡಿಸಿದ ಇಲ್ಲಿನ ರೈತ ಮುಖಂಡರು ಅವರಿಗೆ ₹ 180 ಮನಿ ಆರ್ಡರ್ ಮಾಡಿ ‘ಅನುಕಂಪ, ಆಕ್ರೋಶ’ ವ್ಯಕ್ತಪಡಿಸಿದರು!

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ (ಮಹಿಳಾ ವಿಭಾಗ) ಜಯಶ್ರೀ ಗುರಣ್ಣವರ, ‘ಜನರ ಕಣ್ಣೀರು ಒರೆಸ
ಬೇಕಾದ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿಯೇ ರೈತರ ಬಗ್ಗೆ ಉಡಾಫೆಯ ಮಾತುಗಳನ್ನು ಆಡಿದ್ದಾರೆ. ನನ್ನ ಬೆಳೆಯೂ ಹಾಳಾಗಿದೆ ಎಂದು ಹೇಳಿ ಸಂತ್ರಸ್ತರಲ್ಲಿ ಸಂತ್ರಸ್ತರಾಗಿದ್ದಾರೆ. ಅವರಿಗೆ ನಾವೇ ಹಣ ಸಂಗ್ರಹಿಸಿ ಪರಿಹಾರವೆಂದು ಕೊಟ್ಟಿದ್ದೇವೆ’ ಎಂದು ವ್ಯಂಗ್ಯವಾಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ರೈತರು ಪ್ರತಿಭಟಿಸಿದರು.

Post Comments (+)