ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾಗಲು ಪರೋಲ್‌ ಕೇಳಿದ್ದ ಮುಂಬೈ ಸ್ಫೋಟ ಪ್ರಕರಣದ ರೂವಾರಿಯ ಅರ್ಜಿ ತಿರಸ್ಕೃತ

Last Updated 21 ಏಪ್ರಿಲ್ 2018, 7:33 IST
ಅಕ್ಷರ ಗಾತ್ರ

ಮುಂಬೈ: ಮದುವೆಯಾಗುವ ಸಲುವಾಗಿ ಪರೋಲ್‌ಗೆ ಅರ್ಜಿ ಸಲ‌್ಲಿಸಿದ್ದ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ರೂವಾರಿ ಅಬು ಸಲೇಂ ಮನವಿಯನ್ನು ನವಿ ಮುಂಬೈ ಕಮಿಷನರ್‌ ತಿರಸ್ಕರಿಸಿದ್ದಾರೆ.

ಸಯ್ಯದ್‌ ಬಹರ್‌ ಕೌಸರ್‌ ಜತೆ ಎರಡನೇ ಮದುವೆಯಾಗಲು 45 ದಿನಗಳ ಕಾಲ ಬಿಡುಗಡೆಗೆ ಅವಕಾಶ ಕೋರಿ ಸಲೇಂ ಅರ್ಜಿ ಸಲ್ಲಿಸಿದ್ದ.

1993ರ ಮಾರ್ಚ್‌ 12ರಂದು ಮುಂಬೈನ 12 ಸ್ಥಳಗಳಲ್ಲಿ ನಡೆದ ಸ್ಫೋಟಗಳಲ್ಲಿ 257 ಜನರು ಸತ್ತಿದ್ದರಲ್ಲದೆ 713 ಜನರು ಗಂಭೀರವಾಗಿ ಗಾಯಗೊಂಡಿದ್ದರು. ₹27 ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

ಸ್ಫೋಟದ ಸಂಚುಕೋರರಾದ ಸಲೇಂ ಮತ್ತು ಕರಿಮುಲ್ಲಾ ಖಾನ್‌ಗೆ ಇಲ್ಲಿನ ವಿಶೇಷ ‘ಟಾಡಾ’ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಕಳೆದ ವರ್ಷ ತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT