ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವರ ಪಾಲಿಗೆ ಟೂರಿಂಗ್ ಸ್ಪಾಟ್‌

ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯ
Last Updated 15 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯವು ಪ್ರವಾಹದಿಂದ ತೀವ್ರ ಸಂಕಷ್ಟದಲ್ಲಿರುವಾಗ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಬಂದು ಹೋಗಿದ್ದಾರೆ ಹೊರತು ಅನುದಾನ‌ ಬಿಡುಗಡೆ ಮಾಡುವ ಕುರಿತು ಮಾತೇ ಆಡಿಲ್ಲ. ಕನಿಷ್ಠ ₹ 10 ಸಾವಿರ ಕೋಟಿ ಅನುದಾನವನ್ನಾದರೂ ಘೋಷಿಸಬೇಕಿತ್ತು. ಇದರಿಂದ ರಾಜ್ಯ ಒಂದು ರೀತಿ ಟೂರಿಂಗ್ ಸ್ಪಾಟ್ ಆದಂತಾಗಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಜಿಲ್ಲೆಯ ಚಿತ್ತಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರವಾಹದ ಕಾರಣ 4 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. 3 ಲಕ್ಷ ಜನ ನಿರಾಶ್ರಿತರ ಶಿಬಿರದಲ್ಲಿ ಇದ್ದಾರೆ. ಸಾವು ನೋವುಗಳಾಗಿವೆ. ₹ 40 ಸಾವಿರ ಕೋಟಿ ಹಾನಿ‌ ಅಂದಾಜಿಸಲಾಗಿದೆ’ ಎಂದರು.

‘ಶೀಘ್ರ ಪರಿಹಾರ ನೀಡುವ ಬದಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೋಟು ಪ್ರಿಂಟ್ ಮಾಡುವ ಮಷೀನು ಇಟ್ಟಿಲ್ಲ ಎಂದಿರುವುದು ಜನರಿಗೆ ಮಾಡಿದ ಅನ್ಯಾಯ. ಅವರು ಈ ರೀತಿ ಹೇಳಿಕೆ ನೀಡಿದ್ದು ಖಂಡನೀಯ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT