ಫಲಪುಷ್ಪ ಪ್ರದರ್ಶನ ಯೋಧರಿಗೆ ಸಮರ್ಪಣೆ: ಮುಖ್ಯಮಂತ್ರಿ ಕುಮಾರಸ್ವಾಮಿ

7

ಫಲಪುಷ್ಪ ಪ್ರದರ್ಶನ ಯೋಧರಿಗೆ ಸಮರ್ಪಣೆ: ಮುಖ್ಯಮಂತ್ರಿ ಕುಮಾರಸ್ವಾಮಿ

Published:
Updated:

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಶನಿವಾರ 208ನೇ ಫಲಪುಷ್ಪ ಪ್ರದರ್ಶನ ಸಂಭ್ರಮ ಆರಂಭವಾಗಿದ್ದು ಆಗಸ್ಟ್‌ 15ರ ವರೆಗೆ ನಡೆಯಲಿದೆ.

ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಈ ಬಾರಿ ಸೈನಿಕರಿಗೆ ಪುಷ್ಪ‌ನಮನ ಸಲ್ಲಿಸಲಾಗುತ್ತಿದೆ. ಅದಕ್ಕಾಗಿ ಲಾಲ್‌ಬಾಗ್‌ ಅದ್ದೂರಿಯಾಗಿ‌ ಸಿಂಗಾರಗೂಂಡಿದೆ. ಸೇನಾಪಡೆಯ ನೈಜ ಚಿತ್ರಣ ಸಸ್ಯಕಾಶಿಯಲ್ಲಿ ಅನಾವರಣವಾಗಿದೆ’ ಎಂದರು.

‘ಈ ಬಾರಿಯ ಪ್ರದರ್ಶನವನ್ನು ಯೋಧರಿಗೆ ಸರ್ಮಪಣೆ ಮಾಡಲಾಗಿದೆ. ಸಾಕಷ್ಟು ವಿಧವಿಧವಾದ ಹೂವುಗಳಿಂದ ಅಲಂಕಾರಗೊಂಡಿರುವ ಈ ಅಪರೂಪ ದೃಶವನ್ನು ಪ್ರವಾಸಿಗರು ಬಂದು ಕಣ್ಣುತುಂಬಿಕೂಳ್ಳಬೇಕು’ ಎಂದೂ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಭಾರತದ ರಕ್ಷಣಾ ಪಡೆಗಳಿಗೆ ಪುಷ್ಪನಮನ ಸಲ್ಲಿಸುತ್ತಿರುವುದು ಈ ಬಾರಿಯ ಆಕರ್ಷಣೆ. ಕನ್ನಡ ಚಿತ್ರರಂಗ 85 ವಸಂತಗಳನ್ನು ಪೂರೈಸಿರುವುದರಿಂದ ಚಿತ್ರರಂಗದ ಸಾಧನೆಗೂ ಪುಷ್ಪ ಗೌರವ ಸಲ್ಲಿಸಲಾಗುತ್ತಿದೆ.

 

ಭೂ ಸೇನೆ, ವಾಯುಸೇನೆ, ನೌಕಾಪಡೆಯ ವಿವಿಧ ಯುದ್ಧ ಪರಿಕರಗಳು, ಸಾಧನಗಳ ಮಾದರಿಗಳು ಪ್ರದರ್ಶನ ಮೇಳದಲ್ಲಿವೆ. ಎಚ್‌ಎಎಲ್‌, ಬಿಇಎಂಎಲ್‌ ಸೇರಿದಂತೆ ವಿವಿಧ ಸಂಸ್ಥೆಗಳು ವಿಮಾನ ಮತ್ತು ಕ್ಷಿಪಣಿಗಳ ಪ್ರತಿಕೃತಿ ತಯಾರಿಸಲು ಸಹಕರಿಸಿವೆ

ಪ್ರದರ್ಶನಕ್ಕಾಗಿ ಒಂದೂವರೆ ಲಕ್ಷಕ್ಕೂ ಹೆಚ್ಚು ಡಚ್ ತಳಿಯ ಗುಲಾಬಿ ಹೂಗಳ ಬಳಕೆ ಮಾಡಲಾಗಿದೆ. ಪುಣೆ, ಊಟಿ, ಶೀತವಲಯದ ಹೂಗಳ ಸಮಾಗಮವೂ ಆಗಿದೆ.

ಭದ್ರತೆ ದೃಷ್ಟಿಯಿಂದ ಲಾಲ್‌ಬಾಗ್‌ನಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನೇಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !