ಗುರುವಾರ , ನವೆಂಬರ್ 21, 2019
22 °C

ಜಾನಪದ ಕಲಾವಿದ ಖೇಮು ತುಳುಸು ಗೌಡ

Published:
Updated:
Prajavani

ಅಂಕೋಲಾ(ಉತ್ತರ ಕನ್ನಡ): ಜಾನ‍‍ಪದ ಕಲಾವಿದ, ನಾಟಿ ವೈದ್ಯ ಖೇಮು ತುಳುಸು ಗೌಡ (73), ತಾಲ್ಲೂಕಿನ ಬೇಲೆಕೇರಿಯ ಸೀಬರ್ಡ್ ಕಾಲೊನಿಯಲ್ಲಿರುವ ಸ್ವಗೃಹದಲ್ಲಿ ಶನಿವಾರ ನಿಧನರಾದರು. ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 

ಅವರಿಗೆ ಪತ್ನಿ ಹಾಗೂ ಮೂವರು ಪುತ್ರರಿದ್ದಾರೆ. 

ಖೇಮು ತುಳುಸು ಗೌಡ ಅವರಿಗೆ 2018ರಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹಾಲಕ್ಕಿ ಸಮುದಾಯದ ವಿಶೇಷ ಕಲೆಗಳಾದ ಸುಗ್ಗಿ ಕುಣಿತ, ಗುಮುಟೆ ವಾದನ ಹಾಗೂ ಸುಗ್ಗಿಯ ತುರಾಯಿ ಕಟ್ಟುವುದರಲ್ಲಿ 50 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು.  ಹೋಳಿ ಹಬ್ಬದ ಸಂದರ್ಭದಲ್ಲಿ ಊರೂರು ಅಲೆದು ಸುಗ್ಗಿ ಕುಣಿತದ ಪ್ರದರ್ಶನ ಮಾಡುತ್ತಿದ್ದರು. ಊರಿನ ಯುವಕರಿಗೂ ತರಬೇತಿ ನೀಡಿ ಈ ಕಲೆಯನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು. 

ಅವರು ವಿಷಜಂತು ಕಡಿತ, ಮೂಲವ್ಯಾಧಿ, ನವಲೆಗಳಂತಹ ಹಲವು ರೋಗಗಳಿಗೆ ಗಿಡಮೂಲಿಕೆ ಔಷಧವನ್ನೂ ನೀಡುತ್ತಿದ್ದರು.

ಪ್ರತಿಕ್ರಿಯಿಸಿ (+)