ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದುರಂತ–1,508 ಕಾಲುಸಂಕ ನಿರ್ಮಾಣ

ಶಾಲಾ ಮಕ್ಕಳು ನಡೆದಾಡುವ ಕಾಲು‘ಸಂಕಟ’–₹ 187 ಕೋಟಿ ವೆಚ್ಚದಲ್ಲಿ ಪರಿಹಾರ
Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು:ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದೊಡ್ಲಿಮನೆ ಹಳ್ಳದ ಕಾಲುಸಂಕದಲ್ಲಿ ಜಾರಿ ಬಿದ್ದು ಶಾಲಾ ಬಾಲಕಿ ಆಶಿಕಾ ಮೃತಪಟ್ಟು ವರ್ಷ ಕಳೆದಿದ್ದು, ಅದೇ ಸ್ಥಳದಲ್ಲಿ ಇದೀಗ ಸಿಮೆಂಟಿನ ಶಾಶ್ವತ ಕಾಲುಸಂಕ ನಿರ್ಮಾಣವಾಗಿದೆ.

ಜತೆಗೆ ರಾಜ್ಯದ ವಿವಿಧೆಡೆ₹ 187 ಕೋಟಿ ವೆಚ್ಚದಲ್ಲಿ ಶಾಲಾ ಮಕ್ಕಳು ನಡೆದಾಡುವ 1,508 ಕಾಲುಸಂಕಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

‘ಕಳೆದ ವರ್ಷದ ದುರಂತ ಇಲಾಖೆಯ ಕಣ್ಣು ತೆರೆಸಿತ್ತು. ಬಹುತೇಕ ಎಲ್ಲ ಕಾಲುಸಂಕಗಳ ನಿರ್ಮಾಣಕ್ಕೆ ಟೆಂಡರ್‌ ಕರೆದು ಕಾಮಗಾರಿ ಆರಂಭವಾಗಿದೆ. 132ಕಾಲುಸಂಕಗಳು ಈಗಾಗಲೇ ಪೂರ್ಣಗೊಂಡಿವೆ. ಇನ್ನೂ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೆ.ಎಸ್‌.ಕೃಷ್ಣಾ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷ ಹೊಸದಾಗಿ ಕಾಲುಸಂಕ ನಿರ್ಮಾಣಕ್ಕೆ ಶಾಸಕರು ಬೇಡಿಕೆ ಸಲ್ಲಿಸಿದರೆ ಅದನ್ನು ದಾಖಲಿಸಿ ಇಟ್ಟುಕೊಳ್ಳಿ, ಈಗಾಗಲೇ ಆರಂಭಿಸಿರುವ ಕಾಲುಸಂಕ ಯೋಜನೆಯನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT