ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ತಿಂಗಳಲ್ಲಿ ನಾಲ್ಕು ಕಾಡುಕೋಣ ಸಾವು

ಸೋಮವಾರ, ಜೂನ್ 17, 2019
22 °C
ಜೊಯಿಡಾ ತಾಲ್ಲೂಕಿನ ಸಂರಕ್ಷಿತ ಪ್ರದೇಶದಲ್ಲಿ ಮರಣ ಮೃದಂಗ

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ತಿಂಗಳಲ್ಲಿ ನಾಲ್ಕು ಕಾಡುಕೋಣ ಸಾವು

Published:
Updated:
Prajavani

ಜೊಯಿಡಾ: ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಕಾಡುಕೋಣಗಳ ಸಾವು ಮುಂದುವರಿದಿದೆ. ಬರಪಾಲಿ ಸಮೀಪದ ದೀಗಾಳಿ ಕಾಡಿನಲ್ಲಿ ಮೃತಪಟ್ಟ ಕಾಡುಕೋಣದ ಅಂತ್ಯಕ್ರಿಯೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ನೆರವೇರಿಸಿದರು. ಅಂದಾಜು 12 ವರ್ಷ ಪ್ರಾಯದ ಇದು, ಎರಡು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ.

ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ ಅಣಶಿ ವನ್ಯಜೀವಿ ವಲಯದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಕಾಡುಕೋಣಗಳು ಮೃತಪಟ್ಟಿವೆ. ಕಟ್ಟೆ, ಕೋಡುಗಾಳಿ, ಕಡಗರ್ಣಿಯಲ್ಲೂ ಈ ಮೊದಲು ಕಳೇಬರಗಳು ಸಿಕ್ಕಿದ್ದವು. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ಹಾಗೂ ಕುಂಬಾರವಾಡಾ ವಲಯದಲ್ಲಿ ಕಾಡುಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. 

‘ನೀರಿನ ಕೊರತೆ ಕಾರಣವಲ್ಲ’: ‘ಅಣಶಿ ವನ್ಯಜೀವಿ ವಲಯದಲ್ಲಿ ಕಾಡುಕೋಣಗಳ ಸಾವಿಗೆ ನೀರಿನ ಸಮಸ್ಯೆ ಕಾರಣವಲ್ಲ’ ಎಂದು ಕುಂಬಾರವಾಡ ವಲಯದ ಸಹಾಯಕ ಸಂರಕ್ಷಣಾಧಿಕಾರಿ ಎಸ್.ತೋಡಕರ ಸ್ಪಷ್ಟಪಡಿಸಿದ್ದಾರೆ. 

‘ದೀಗಾಳಿಯಲ್ಲಿ ಕಾಡುಕೋಣ ಸತ್ತಿರುವ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲೇ ವನ್ಯಪ್ರಾಣಿಗಳಿಗಾಗಿ ನಿರ್ಮಿಸಲಾದ ‘ಟೈಗರ್ ಟ್ಯಾಂಕ್’ (ಕೆರೆ) ಇದೆ. ಅದರಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಆದರೆ, ಅವುಗಳ ಸಾವಿಗೆ ನಿರ್ದಿಷ್ಟ ಕಾರಣವೇನು ಎಂಬುದು ವೈದ್ಯಕೀಯ ವರದಿ ಬಂದ ನಂತರವೇ ತಿಳಿಯಬೇಕಿದೆ’ ಎಂದು ಅವರು ಹೇಳಿದ್ದಾರೆ.

ದಿಗಾಳಿ ಕಾಡಿನಲ್ಲಿ ಮೃತ ಕಾಡುಕೋಣದ ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗದ ವನ್ಯಜೀವಿ ವಲಯದ ಪಶುವೈದ್ಯಾಧಿಕಾರಿ ವೈದ್ಯ ಡಾ.ವಿನಯ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಅದರ ಅಂಗಾಂಗಳ ಮಾದರಿಯನ್ನು ಪರೀಕ್ಷೆಗಾಗಿ ಅವರು ತೆಗೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಶಿರಸಿ ವಿಭಾಗದ ಸಹಾಯಕ ನಿರ್ದೇಶಕ ಡಾ.ದೇವೇಂದ್ರ ಲಮಾಣಿ, ಕುಂಬಾರವಾಡಾ ಪಶು ವೈದ್ಯಾಧಿಕಾರಿ ಮಲ್ಲೇಶಿ ಇದ್ದರು.

ಕಾಡುಕೋಣದ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅಣಶಿ ವಲಯ ಅರಣ್ಯಾಧಿಕಾರಿ ಈರೇಶ ಕಬ್ಬಿನ, ಕುಂಬಾರವಾಡ, ಗುಂದ, ಕ್ಯಾಸಲರಾಕ್ ವನ್ಯಜೀವಿ ವಲಯಗಳ ಅರಣ್ಯಾಧಿಕಾರಿಗಳು, ವನಪಾಲಕರಾದ ರಾಘವೇಂದ್ರ ನಾಯ್ಕ, ಜಗದೀಶ ಮಸಳಿ, ಅರಣ್ಯ ರಕ್ಷಕರು, ಕಾವಲುಗಾರರು ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !