ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಸ್ಥಗಿತ: ಮತದಾರರ ಪರದಾಟ

ಬಳ್ಳಾರಿ ಜಿಲ್ಲೆಯ ಅಲ್ಲಲ್ಲಿ ಮತಯಂತ್ರ ದೋಷ
Last Updated 13 ಮೇ 2018, 11:08 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಹಲವು ಕ್ಷೇತ್ರಗಳ ಮತಯಂತ್ರ ಮತ್ತು ಮತಖಾತರಿ ಯಂತ್ರಗಳಲ್ಲಿ ತಾಂತ್ರಿಕ ದೋಷ ಏರ್ಪಟ್ಟ ಪರಿಣಾಮ ಮತದಾನ ಸ್ಥಗಿತಗೊಂಡಿತ್ತು. ಕೆಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡರೆ, ಇನ್ನೂ ಕೆಲವೆಡೆ ಅರ್ಧ ಗಂಟೆ ಕಾಲ ಸ್ಥಗಿತಗೊಂಡಿತ್ತು. ಕೆಲವೆಡೆ ದೋಷದ ಕಾರಣ ಮತದಾನ ಸರಿಯಾದ ಸಮಯಕ್ಕೆ ಆರಂಭವಾಗಲೇ ಇಲ್ಲ.

ಕಂಪ್ಲಿ ಕ್ಷೇತ್ರದ ಕಪ್ಪಗಲ್ಲು ಗ್ರಾಮದಲ್ಲಿ ಮತಯಂತ್ರ ಕೆಟ್ಟು, ಅದನ್ನು ಬದಲಾಯಿಸುವವರೆಗೂ ಮತದಾನ ನಡೆಯಲಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇಲ್ಲಿ ನೂರಾರು ಮಹಿಳೆಯರು ಕಾಯುತ್ತಾ ಕುಳಿತಿದ್ದರು, ನಂತರ ಏರ್ಪಟ್ಟ ನೂಕು ನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ಪರದಾಡಿದರು.

ಕುರುಗೋಡು ಸಮೀಪದ 116ನೇ ಮತಗಟ್ಟೆ ಹಾಗೂ ಗೆಣಕಹಾಳ್‌ ಗ್ರಾಮದ 98ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 10ರಿಂದ 11ರವರೆಗೆ, ಪಟ್ಟಣಸೆರಗು ಗ್ರಾಮದ 133ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 10.30 ರಿಂದ 12.00 ರವರೆಗೂ ಮತದಾನ ಸ್ಥಗಿತಗೊಂಡಿತ್ತು.

ದೇವಸಮುಂದ್ರದ 14ನೇ ಮತಗಟ್ಟೆಯಲ್ಲಿ ವಿವಿ ಪ್ಯಾಟ್‌ ಸ್ಥಗಿತಗೊಂಡು ಬೆಳಿಗ್ಗೆ 7ರಿಂದ 8ರವರೆಗೆ ನಂ.10ಮುದ್ದಾಪುರದಲ್ಲಿ ಬೆಳಿಗ್ಗೆ 11.55 ರಿಂದ ಮಧ್ಯಾಹ್ನ 1.15ರವರೆಗೆ ಮತದಾನ ನಡೆಯಲಿಲ್ಲ.

ಹೂವಿನಹಡಗಲಿ ಕ್ಷೇತ್ರದ ಕಂದಗಲ್ಲು ಗ್ರಾಮದ 15ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 8 ರಿಂದ 8.15ರವಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕೊಟ್ಟೂರು ಪಟ್ಟಣದಲ್ಲಿ 123ನೇ ಮತಗಟ್ಟೆಯ ವಿವಿ ಪ್ಯಾಟ್‌ ಬೆಳಿಗ್ಗೆ 11 ರಿಂದ 11.20ರವರೆಗೆ ಸ್ಥಗಿತವಾಗಿತ್ತು.

ರಾಯರಾಳತಾಂಡದ 91ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 11.30 ರಿಂದ 11.55 ರವರೆಗೆ ವಿವಿ ಪ್ಯಾಟ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು.

ಜಿ.ನಾಗಲಾಪುರದ 61ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 7 ರಿಂದ 7.30ರವರೆಗೆ ಬ್ಯಾಲೆಟ್‌ ಯುನಿಟ್‌ನಲ್ಲಿ ಬಟನ್‌ ದೋಷ. ಗರಗ ಗ್ರಾಮದ 65ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 7. ರಿಂದ 7.15ರವರೆಗೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು.
ಕೂಡ್ಲಿಗಿ ಕ್ಷೇತ್ರದ ಸುಳದಹಳ್ಳಿಯ 139ನೇ ಮತಗಟ್ಟೆಯಲ್ಲಿ ಬೆಳಿಗ್ಗೆ
7 ರಿಂದ 7.45ರವರೆಗೆ ಮತಯಂತ್ರದಲ್ಲಿ ದೋಷ ಕಂಡು ಬಂದ ಪರಿಣಾಮ ತಡವಾಗಿ ಮತದಾನ ಆರಂಭ
ವಾಯಿತು.

ಸಂಡೂರು ಪಟ್ಟಣದ 62ನೇ ಮತಗಟ್ಟೆಯಲ್ಲಿ ಮತಯಂತ್ರ ಬೆಳಿಗ್ಗೆ 6.15 ರಿಂದ 6.45 ರವರೆಗೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಕುಡಿತಿನಿ ಪಟ್ಟಣದ 165ರ ಮತಗಟ್ಟೆಯಲ್ಲಿ ಬೆಳಿಗ್ಗೆ 7.15ರಿಂದ 8.00ರವರೆಗೆ ವಿವಿ ಪ್ಯಾಟ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು.

ವಿಜಯನಗರ ಕ್ಷೇತ್ರದ ಬಯಲು ವದ್ದಿಗೇರಿಯ 214ನೇ ಮತಗಟ್ಟೆಯಲ್ಲೂ ಸಂಜೆ 4ರ ವೇಳೆಗೆ ಅರ್ಧ ಗಂಟೆ ಮತದಾನ ಸ್ಥಗಿತಗೊಂಡಿತ್ತು.

ಕುಡಿತಿನಿ ಪಟ್ಟಣದ 150ನೇ ಮತಗಟ್ಟೆಯಲ್ಲಿ ವೀಲ್‌ ಚೇರ್‌ ಸೌಕರ್ಯ ಇಲ್ಲದ ಕಾರಣ ಬೇರೊಬ್ಬರ ಸಹಾಯ ಪಡೆದು ಅಂಗವಿಕಲರು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT