ಶಿಥಿಲ ಶಾಲಾ ಕಟ್ಟಡಗಳ ದುರಸ್ತಿಗೆ ಹಣದ ಕೊರತೆ

7

ಶಿಥಿಲ ಶಾಲಾ ಕಟ್ಟಡಗಳ ದುರಸ್ತಿಗೆ ಹಣದ ಕೊರತೆ

Published:
Updated:

ಬೆಂಗಳೂರು: ರಾಜ್ಯದಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕಟ್ಟಡಗಳನ್ನು ದುರಸ್ತಿಗೊಳಿಸಲು ಒಟ್ಟು ₹ 2581 ಕೋಟಿ ಬೇಕಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಸಚಿವ ಎನ್‌.ಮಹೇಶ್‌ ವಿಧಾನಪರಿಷತ್‌ಗೆ ಮಾಹಿತಿ ನೀಡಿದ್ದಾರೆ. 

ಇದರಲ್ಲಿ ಪ್ರಾಥಮಿಕ ಶಾಲೆಗಳಿಗೆ ₹ 1087 ಕೋಟಿ ಮತ್ತು ಪ್ರೌಢ ಶಾಲೆಗಳ ಕಟ್ಟಡಗಳಿಗೆ ದುರಸ್ತಿಗಾಗಿ ₹ 1494 ಕೋಟಿ ಬೇಕಾಗುತ್ತದೆ. ಆದರೆ, ಈಗ ಸರ್ಕಾರ ನೀಡುತ್ತಿರುವ ಅನುದಾನ ಏನಕ್ಕೂ ಸಾಲುವುದಿಲ್ಲ ಎಂದು ವಿಧಾನಪರಿಷತ್‌ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

***
ಶಿಥಿಲಗೊಂಡಿರುವ ಕಟ್ಟಡಗಳು:

ಪ್ರಾಥಮಿಕ ಶಾಲೆಗಳು; ಕೊಠಡಿಗಳ ಸಂಖ್ಯೆ – 5588;10,258

ಪ್ರೌಢಶಾಲೆಗಳು  – 264;949

***
ಮರುನಿರ್ಮಾಣಕ್ಕೆ ನೀಡಿದ ಅನುದಾನ(2017–18)

ಪ್ರಾಥಮಿಕ ಶಾಲೆಗಳು     ಕೊಠಡಿ                ಮೊತ್ತ
672                           760            ₹66.04 ಕೋಟಿ

ಪ್ರೌಢ ಶಾಲೆಗಳು          ಕೊಠಡಿ                ಮೊತ್ತ

238                           312             ₹41.32 ಕೋಟಿ

***

ದುರಸ್ತಿಗಾಗಿ ನೀಡಿದ ಅನುದಾನ(2017–18)

ಪ್ರಾಥಮಿಕ ಶಾಲೆಗಳು      ಕೊಠಡಿ       ಮೊತ್ತ

1338                         1338         ₹28.66 ಕೋಟಿ

ಪ್ರೌಢ ಶಾಲೆಗಳು             ಕೊಠಡಿ       ಮೊತ್ತ

777                            777        ₹35 ಕೋಟಿ

***
ಶಿಥಿಲಗೊಂಡ ಕಟ್ಟಡಗಳ ಮರು ನಿರ್ಮಾಣ ಮತ್ತು ದುರಸ್ತಿಗೆ ಈಗ ನೀಡುತ್ತಿರುವ ಹಣ ಸಾಲುವುದಿಲ್ಲ ಎಂಬುದು ನಿಜ. ಆದ್ದರಿಂದ ತೀರಾ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು.
ಎನ್‌.ಮಹೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !