ಗುರುವಾರ , ಫೆಬ್ರವರಿ 20, 2020
30 °C

ಕಾಂಗ್ರೆಸ್‌ ಭಿನ್ನಮತ ಬಯಲಿಗೆ: ಸಿದ್ದರಾಮಯ್ಯ ಮಾತಿಗೆ ಪರಮೇಶ್ವರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್‌ ‍ಪಕ್ಷದ ರಾಜ್ಯ ನಾಯಕರ ಮಧ್ಯದ ಭಿನ್ನಮತ ಬಯಲಿಗೆ ಬಂದಿದ್ದು, ಮೂಲ ಹಾಗೂ ವಲಸಿಗರೆಂಬ ಗುಂಪುಗಾರಿಕೆ ಈಗ ಬಣದ ರೂಪ ಪಡೆದುಕೊಂಡಿದೆ.

ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ, ಶಾಸಕಾಂಗ ಪಕ್ಷದ ನಾಯಕರ (ಸಿಎಲ್‌ಪಿ) ನೇಮಕ ವಿಷಯದಲ್ಲಿ ನಾಯಕರ ಮಧ್ಯೆ ಇರುವ ಭಿನ್ನಾಭಿಪ್ರಾಯ ಬಹಿರಂಗ ಹೇಳಿಕೆಯ ಮೂಲಕ ಹೊರಹೊಮ್ಮಿದೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿರೋಧ ಪಕ್ಷದ ನಾಯಕ ಸ್ಥಾನ ಉಳಿಸಿಕೊಂಡಿರುವ ಸಿದ್ದರಾಮಯ್ಯ ಅವರು ‘ಸಿಎಲ್‌ಪಿ, ವಿರೋಧ ಪಕ್ಷದ ನಾಯಕನ ಸ್ಥಾನ ಬೇರ್ಪಡಿಸಬಾರದು. ಎರಡೂ ಹುದ್ದೆಗಳನ್ನು ಒಬ್ಬರಿಗೆ ನೀಡಬೇಕು’ ಎಂದು ಬಹಿರಂಗವಾಗಿಯೇ ಹೇಳಿದ್ದರು.

ಮತ್ತೊಬ್ಬ ಹಿರಿಯ ಮುಖಂಡ, ಶಾಸಕ ಜಿ.ಪರಮೇಶ್ವರ ಈ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಸಿಎಲ್‌ಪಿ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಒಬ್ಬರಿಗೆ ನೀಡಬಾರದು. ಎರಡೂ ಹುದ್ದೆಗಳನ್ನು ಪ್ರತ್ಯೇಕಿಸಿ ಇಬ್ಬರಿಗೆ ಅಧಿಕಾರ ಹಂಚಿಕೆ ಮಾಡಬೇಕು’ ಎಂದಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ‘ಎರಡೂ ಸ್ಥಾನಗಳನ್ನು ಪ್ರತ್ಯೇಕಿಸಿದರೆ ಇಬ್ಬರಿಗೆ ಅಧಿಕಾರ ನೀಡಬಹುದು. ಪ್ರತ್ಯೇಕಿಸುವುದು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದರೆ, ಅದು ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ಬೇರೆ ಕಾರಣಗಳಿರಬಹುದು. ಆದರೆ ಪ್ರತ್ಯೇಕಿಸುವಂತೆ ನನ್ನ ಅಭಿಪ್ರಾಯ ಹೇಳುತ್ತಿದ್ದೇನೆ’ ಎಂದರು.

‘ಪಕ್ಷದ ಹಿತದೃಷ್ಟಿಯಿಂದ ಕಾರ್ಯಾಧ್ಯಕ್ಷರನ್ನು ನೇಮಿಸಬಾರದು. ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಿದರೆ ಗುಂಪುಗಾರಿಕೆ ಆರಂಭವಾಗುತ್ತದೆ’ ಎಂದು ಅವರು ಹೇಳಿದರು.

ಡಿಕೆಶಿ ಕುಟುಕು

‘ನಾನು ವ್ಯಕ್ತಿ ಪೂಜೆ ಮಾಡುವವನಲ್ಲ. ಪಕ್ಷ ಪೂಜೆ ಮಾಡುವವನು’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು.

‘ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಗೆ ಸಿದ್ದರಾಮಯ್ಯ ವಿರೋಧ ಇದೆಯಂತೆ ಹೌದಾ’ ಎಂಬ ಪ್ರಶ್ನೆಗೆ ಉತ್ತರಿಸಿ, ‘ನಾನು ಗುಂಪು ಕಟ್ಟಿಕೊಂಡು ಅಧಿಕಾರ ಕೊಡಿ ಎಂದು ಎಲ್ಲಿಗೂ ಹೋಗಲ್ಲ. ಯಾರು ಎಷ್ಟು ಬಣ ಸೃಷ್ಟಿಸಿಕೊಳ್ಳುತ್ತಾರೊ ಸೃಷ್ಟಿಸಿಕೊಳ್ಳಲಿ’ ಎಂದರು.

 

ಇನ್ನಷ್ಟು... 

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ: ಚಾಲ್ತಿಗೆ ಬಂತು ಮತ್ತೊಂದು ಲೆಕ್ಕಾಚಾರ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುವೆ: ಸತೀಶ ಜಾರಕಿಹೊಳಿ 

ಕೆಪಿಸಿಸಿ ಅಧ್ಯಕ್ಷ ಸ್ಥಾನ: ಪ್ರಮುಖರ ಕಣ್ಣು 

ಎಂ.ಬಿ. ಪಾಟೀಲಗೆ ಕೆಪಿಸಿಸಿ ಸಾರಥ್ಯ? ವರಿಷ್ಠರ ಜೊತೆಗೆ ಸಿದ್ದರಾಮಯ್ಯ ಚರ್ಚೆ 

ಕೆಪಿಸಿಸಿ ಸಾರಥ್ಯ: ವೇಣುಗೋಪಾಲ್‌ ಭೇಟಿಯಾದ ಡಿಕೆಶಿ, ಮುನಿಯಪ್ಪ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು