ಶನಿವಾರ, ಡಿಸೆಂಬರ್ 7, 2019
22 °C

ಗಾಂಧೀಜಿ ಜಾತ್ಯತೀತ ರಾಷ್ಟ್ರ ಎಂದಿರಲಿಲ್ಲ: ನಳಿನ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಗಾಂಧಿಯವರು ಭಾರತ ರಾಮ ರಾಜ್ಯವಾಗಬೇಕು ಎಂದಿದ್ದರೇ ವಿನಾ ಈ ದೇಶ ಜಾತ್ಯತೀತ ರಾಷ್ಟ್ರವಾಗಬೇಕೆಂದು ಉಲ್ಲೇಖ ಮಾಡಿರಲಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಬುಧವಾರ ಇಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಎರಡು ರೀತಿಯಲ್ಲಿ ಹಬ್ಬಿತ್ತು. ಒಂದು ಗಾಂಧೀಜಿ ನೇತೃತ್ವದ ಅಹಿಂಸಾತ್ಮಕ ಹೋರಾಟ, ಇನ್ನೊಂದು ವೀರ ಸಾವರ್ಕರ್, ಭಗತ್‌ ಸಿಂಗ್‌ರಂತಹ ಕ್ರಾಂತಿವೀರರ ಹೋರಾಟ. ಸ್ವಾತಂತ್ರ್ಯ ಸಿಗುವ ವಿಚಾರ ಮನದಟ್ಟು ಮಾಡಿಕೊಂಡ ಗಾಂಧೀಜಿ, ಸ್ವಾತಂತ್ರ್ಯೋತ್ತರ ಭಾರತದ ಚಿಂತನೆ ಹೇಗಿರಬೇಕು ಎಂಬ ಬಗ್ಗೆ ಅದ್ಭುತ ವ್ಯಾಖ್ಯಾನ ನೀಡಿ, ಭಾರತ ರಾಮ ರಾಜ್ಯವಾಗಬೇಕು ಎಂದಿದ್ದರು’ ಎಂದರು.

‘ಸ್ವಾತಂತ್ರ್ಯ ಬಂದ ಮೇಲೆ ಪ್ರಥಮ ಪ್ರಧಾನಿಯಾಗಿದ್ದ ನೆಹರು ಚಿಂತನೆಯ ದಿಕ್ಕು ತಪ್ಪಿಸಿದರು. ಅವರ ಮಂತ್ರಿಮಂಡಲದಿಂದ ಹೊರ ಬಂದ ಶ್ಯಾಮಪ್ರಸಾದ್ ಮುಖರ್ಜಿ, ಜನಸಂಘ ಕಟ್ಟಿದರು. ಈ ದೇಶಕ್ಕೆ ಒಂದೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನ ಇರಬೇಕು ಎಂದು ಹೋರಾಟ ನಡೆಸಿದರು. ಆದರೆ, ಕಾಂಗ್ರೆಸ್ ಭಾರತದ ಮುಕುಟವಾಗಿರುವ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. 68 ವರ್ಷಗಳ ಹಿಂದೆ ಮುಖರ್ಜಿ ಹೇಳಿದ್ದ ವಿಚಾರಧಾರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸಾಕಾರಗೊಂಡಿತು’ ಎಂದು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನದ ರದ್ದತಿಯನ್ನು ಸಮರ್ಥಿಸಿಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು