ಗುರುವಾರ , ಅಕ್ಟೋಬರ್ 17, 2019
21 °C

ಹಿಂದಿಗೆ ‘ಗೀತ ಗೋವಿಂದಂ’ ರಿಮೇಕ್‌

Published:
Updated:
Prajavani

‘ಚೆನ್ನೈ ಎಕ್ಸ್‌ಪ್ರೆಸ್‌’, ‘ಸಿಂಗಂ’, ‘ದಿಲ್‌ವಾಲೆ’ ಸಿನಿಮಾಗಳ ಖ್ಯಾತಿಯ ರೋಹಿತ್‌ ಶೆಟ್ಟಿ, ತೆಲುಗಿನ ಬ್ಲಾಕ್‌ಬಸ್ಟರ್‌ ಸಿನಿಮಾ ‘ಗೀತ ಗೋವಿಂದಂ’ ರಿಮೇಕ್‌ ಹಕ್ಕು ಪಡೆದುಕೊಂಡಿದ್ದಾರೆ.

ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಗೀತ ಗೋವಿಂದಂ’ ತೆಲುಗಿನಲ್ಲಿ ₹132 ಕೋಟಿ ಗಳಿಕೆ ಮಾಡಿತ್ತು.  ಈ ಸಿನಿಮಾಕ್ಕಾಗಿ ಕೇವಲ ₹5 ಕೋಟಿ ಮಾತ್ರ ಖರ್ಚು ಮಾಡಲಾಗಿತ್ತು. ಅಲ್ಲು ಅರವಿಂದ್ ನಿರ್ಮಾಣದಲ್ಲಿ, ಪರಸುರಂ ಈ ಸಿನಿಮಾವನ್ನು ನಿರ್ದೇಶಿಸಿದ್ದರು.

ಹಿಂದಿಯಲ್ಲಿ ತೆರೆಕಾಣುವ ‘ಗೀತ ಗೋವಿಂದಂ’ ಸಿನಿಮಾದ ನಿರ್ಮಾಣದ ಹೊಣೆಯನ್ನು ಮಾತ್ರ ಹೊರುವ ಬಗ್ಗೆ ರೋಹಿತ್ ಶೆಟ್ಟಿ ಯೋಜಿಸಿದ್ದಾರೆ. ಅನಿವಾರ್ಯ ಸಂದರ್ಭ ಬಂದರೆ ಮಾತ್ರ ನಿರ್ದೇಶನಕ್ಕೆ ಕೈಹಾಕುತ್ತೇನೆ ಎಂದೂ ಅವರು ಹೇಳಿಕೆ ನೀಡಿದ್ದಾರೆ. ರಣವೀರ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಜೋಡಿಯ ‘ಸಿಂಬಾ’ ಸಿನಿಮಾವನ್ನು ರೋಹಿತ್ ನಿರ್ದೇಶಿಸಿದ್ದರು. ಇದು ತೆಲುಗಿನ ‘ಟೆಂಪರ್‌’ ಸಿನಿಮಾದ ರಿಮೇಕ್‌ ಆಗಿತ್ತು. ಈ ಚಿತ್ರ ಬಾಲಿವುಡ್‌ನಲ್ಲಿ ಸದ್ದು ಮಾಡಿತ್ತು.

‘ಗೀತಗೋವಿಂದಂ ರಿಮೇಕ್‌ಗಾಗಿ ಸದ್ಯದಲ್ಲೇ ಹೊಸ ಮುಖಗಳ ಹುಡುಕಾಟ ಆರಂಭಿಸಲಿದ್ದೇನೆ’ ಎಂದು ರೋಹಿತ್ ಹೇಳಿದ್ದಾರೆ.

ರೋಹಿತ್ ಶೆಟ್ಟಿ, ಅಕ್ಷಯ್‌ ಕುಮಾರ್‌ ಅವರೊಂದಿಗೆ ‘ಸೂರ್ಯವಂಶಿ’ ಸಿನಿಮಾ ಮಾಡುತ್ತಿದ್ದಾರೆ. ಫರ್‍ಹಾ ಖಾನ್‌ ನಿರ್ಮಾಣದ ‘ಸತ್ತೇ ಪೆ ಸತ್ತಾ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

Post Comments (+)