ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ‘ಸಿದ್ಧ’ ಸಂದರ್ಶನ: ರಾಹುಲ್‌ ಗಾಂಧಿ ಆರೋಪ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶನಗಳಲ್ಲಿ ಮೊದಲೇ ಸಿದ್ಧಪಡಿಸಿದ ಉತ್ತರಗಳನ್ನು ನೀಡುತ್ತಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ‘ನಿಜವಾದ ಪ್ರಶ್ನೆಗಳಿಗೆ ಮೋದಿ ಅವರು ಉತ್ತರ ನೀಡಿದರೆ ಅದು ನಮಗೆಲ್ಲರಿಗೂ ಮುಜುಗರ ತರುವುದು ಖಚಿತ’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ, ಸಿಂಗಪುರಕ್ಕೆ ಭೇಟಿ ನೀಡಿದ್ದಾಗ ನಾನ್ಯಾಂಗ್‌ ಟೆಕ್ನಲಾಜಿಕಲ್‌ ಯುನಿವರ್ಸಿಟಿಯಲ್ಲಿ (ಎನ್‌ಟಿಯು) ಮೋದಿ ಅವರು ನೀಡಿದ ಸಂದರ್ಶನವನ್ನು ಉಲ್ಲೇಖಿಸಿ ರಾಹುಲ್‌ ಈ ಆರೋಪ ಮಾಡಿದ್ದಾರೆ.

ಪ್ರಶ್ನೆಗೆ ಮೋದಿ ಅವರು ಹಿಂದಿಯಲ್ಲಿ ಉತ್ತರ ನೀಡಿದ ತಕ್ಷಣವೇ ಭಾಷಾಂತರಕಾರರು ಹಾಳೆಯನ್ನು ನೋಡಿ ಓದಿದ್ದರು. ಸಂದರ್ಶನವು ಪೂರ್ವಯೋಜಿತ ಎಂಬ ಅಭಿಪ್ರಾಯ ಬರಲು ಇದು ಕಾರಣವಾಗಿತ್ತು.

‘ನೇರ ಪ್ರಶ್ನೆಗಳಿಗೆ ಎದುರಾಗುವ ಭಾರತದ ಮೊದಲ ಪ್ರಧಾನಿಯ ಉತ್ತರಗಳ ಅನುವಾದದ ಹಸ್ತಪ್ರತಿ ಸಿದ್ಧವಿರುತ್ತದೆ’ ಎಂದು ರಾಹುಲ್‌ ಲೇವಡಿ ಮಾಡಿದ್ದಾರೆ. ಮೋದಿಯವರು ಉತ್ತರ ನೀಡಿದ ಮತ್ತು ಅದರ ಅನುವಾದವನ್ನು ಭಾಷಾಂತರಕಾರರು ಓದಿದ ವಿಡಿಯೊವನ್ನು ರಾಹುಲ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT