ಗೋವಾ: ಹೊರ ರಾಜ್ಯಗಳ ಮೀನಿಗೆ 6 ತಿಂಗಳು ನಿರ್ಬಂಧ

7

ಗೋವಾ: ಹೊರ ರಾಜ್ಯಗಳ ಮೀನಿಗೆ 6 ತಿಂಗಳು ನಿರ್ಬಂಧ

Published:
Updated:

ಕಾರವಾರ: ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳ ಮೀನಿಗೆ ಆರು ತಿಂಗಳು ನಿರ್ಬಂಧ ವಿಧಿಸಿ, ಗೋವಾ ಸರ್ಕಾರ ಆದೇಶಿಸಿದೆ.

ಈ ಆದೇಶವು ನವೆಂಬರ್‌ 12ರಿಂದ ಜಾರಿಗೆ ಬರಲಿದೆ ಎಂದು ಅಲ್ಲಿಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಶನಿವಾರ ಗೋವಾದಲ್ಲಿ ತಿಳಿಸಿದ್ದಾರೆ.

‘ಮೀನುಗಳು ಕೆಡದಂತೆ ಸಿಂಪಡಿಸಲಾಗುವ ಫಾರ್ಮಾಲಿನ್ ಅಂಶವನ್ನು ಪತ್ತೆ ಹಚ್ಚಲು, ಸರ್ಕಾರದಿಂದ ಪ್ರಯೋಗಾಲಯವನ್ನು ತೆರೆಯಲು ಸಿದ್ಧತೆ ನಡೆಸಿದ್ದೇವೆ. ಅದರ ಭಾಗವಾಗಿ, ಆರಂಭಿಕ ಹಂತದಲ್ಲಿ ಆರು ತಿಂಗಳು ಹೊರ ರಾಜ್ಯದ ಮೀನುಗಳನ್ನು ನಿರ್ಬಂಧಿಸುತ್ತಿದ್ದೇವೆ. ಪ್ರಯೋಗಾಲಯ ತೆರೆಯಲು ತಡವಾದಲ್ಲಿ ಅದು ಮತ್ತೆ ಆರು ತಿಂಗಳು ಮುಂದುವರಿಯಲೂಬಹುದು’ ಎಂದು ಹೇಳಿದ್ದಾರೆ.

‘ರಾಜ್ಯದ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಸೋಮವಾರ ಈ ಕುರಿತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸುತ್ತೇನೆ. ನಿಯಮ ಮೀರಿದರೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !