ಗೋಕರ್ಣ ದೇಗುಲ: ಅರ್ಜಿ ಹಿಂಪಡೆದ ಮಠ

7

ಗೋಕರ್ಣ ದೇಗುಲ: ಅರ್ಜಿ ಹಿಂಪಡೆದ ಮಠ

Published:
Updated:

ಬೆಂಗಳೂರು: ಗೋಕರ್ಣ ದೇವಾಲಯದ ಆಡಳಿತ ನಿರ್ವಹಣೆಗೆ ರಚಿಸಿರುವ ಮೇಲುಸ್ತುವಾರಿ ಸಮಿತಿಯ ಕಾರ್ಯಾರಂಭಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೊಸನಗರದ ರಾಮಚಂದ್ರಾಪುರ ಮಠ ಹಿಂಪಡೆದಿದೆ.

ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿ ರಾಜ್ಯ ಸರ್ಕಾರ 2008ರಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿತ್ತು. ದೇವಾಲಯದ ಆಡಳಿತ ನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಲು 2018ರ ಆಗಸ್ಟ್ 10ರಂದು ಆದೇಶಿಸಿತ್ತು. ಅಂತೆಯೇ ಸೆಪ್ಟೆಂಬರ್ 10ರಿಂದ ಸಮಿತಿ ಕಾರ್ಯ ನಿರ್ವಹಣೆ ಆರಂಭಿಸಬೇಕು ಎಂದೂ ಇದೇ ವೇಳೆ ಸ್ಪಷ್ಟಪಡಿಸಿತ್ತು.

ದೇವಾಲಯಕ್ಕೆ ಕೆ.ಎ.ಎಸ್ ಅಧಿಕಾರಿ ಎಚ್.ಹಾಲಪ್ಪ ಅವರನ್ನು ಕಾರ್ಯ ನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡಿ ಮುಜರಾಯಿ ಇಲಾಖೆ ಆಯುಕ್ತರು ಆಗಸ್ಟ್‌ 28ರಂದು ಆದೇಶಿಸಿದ್ದರು.

ಏತನ್ಮಧ್ಯೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮಠವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಶುಕ್ರವಾರ (ಸೆ.7) ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸೆ.10ರವರೆಗೆ ಸಮಿತಿಯ ಕಾರ್ಯಾರಂಭಕ್ಕೆ ನೀಡಿದ್ದ ತಡೆಯಾಜ್ಞೆ ಮುಂದುವರಿಸಿದೆ. ಈ ಕಾರಣಕ್ಕೆ ಮಠವು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಹಿಂಪಡೆದಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !