ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹35 ಸಾವಿರದ ಗಡಿ ದಾಟಿದ ಬಂಗಾರ

Last Updated 11 ಜುಲೈ 2019, 20:15 IST
ಅಕ್ಷರ ಗಾತ್ರ

ಮುಂಬೈ: ದೇಶದಾದ್ಯಂತ ಚಿನಿವಾರ ಪೇಟೆಗಳಲ್ಲಿ ಗುರುವಾರ ಚಿನ್ನದ ಧಾರಣೆಯು ಗಮನಾರ್ಹ ಏರಿಕೆ ಕಂಡಿದೆ.

ದೆಹಲಿಯಲ್ಲಿ ಪ್ರತಿ 10 ಗ್ರಾಂಗೆ ₹35 ಸಾವಿರದ ಗಡಿ ದಾಟಿ ₹ 35,800ಕ್ಕೆ ತಲುಪಿದೆ.

ಬುಧವಾರದ ದರಕ್ಕೆ ಹೋಲಿಸಿದರೆ, ಗುರುವಾರ ದೆಹಲಿಯಲ್ಲಿ ₹ 930, ಚೆನ್ನೈನಲ್ಲಿ ₹ 610 ಮತ್ತು ಮುಂಬೈನಲ್ಲಿ ಗರಿಷ್ಠ ₹ 387ರಂತೆ ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ಚೆನ್ನೈ ಮತ್ತು ದೆಹಲಿಯಲ್ಲಿ ದಿನದ ಬೆಲೆ ಏರಿಕೆಯಲ್ಲಿ ಭಾರಿ ವ್ಯತ್ಯಾಸ ಇದೆ.

ಶೀಘ್ರದಲ್ಲಿಯೇ ಬಡ್ಡಿದರ ಕಡಿತವಾಗುವ ಬಗ್ಗೆ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೊಮ್‌ ಪಾವೆಲ್‌ ಅವರು ಸುಳಿವು ನೀಡಿದ್ದಾರೆ. ಹೀಗಾಗಿ ಜಾಗತಿಕ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನ ಖರೀದಿಗೆ ಮುಂದಾದರು. ಇದರಿಂದ ಬೆಲೆಯಲ್ಲಿ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT