ಮಂಗಳವಾರ, ಡಿಸೆಂಬರ್ 10, 2019
26 °C
4ನೇ ಶನಿವಾರ ರಜೆ ಅನುಮಾನ * ಸಚಿವ ಕೃಷ್ಣ ಬೈರೇಗೌಡ

ಸರ್ಕಾರಿ ರಜೆ ಕಡಿವಾಣ: ಪರಿಶೀಲನೆಗೆ ಉಪಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ರಜೆಗಳ ಸಂಖ್ಯೆ ಕಡಿತಗೊಳಿಸುವ ಕುರಿತು ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ.

‘2019ರಲ್ಲಿ 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ ಹಾಗೂ 21 ಸಾರ್ವತ್ರಿಕ ರಜಾ ದಿನಗಳು ಬರುತ್ತವೆ. 19 ಸಾಂದರ್ಭಿಕ ರಜೆಗಳು ಇವೆ. ರಜಾ ದಿನಗಳ ಸಂಖ್ಯೆ ವಿಪರೀತವಾಗಿದೆ ಎಂಬ ಭಾವನೆ ಇದೆ. ಇದರಿಂದ ಸರಾಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ, ಅಧಿಕಾರಿಗಳಿಗೆ ಅನುಕೂಲವಾಗಲು ವಾರದ ಅಂತ್ಯದಲ್ಲಿ ರಜೆಗಳನ್ನು ನೀಡುವ ಕುರಿತು ಪರಿಶೀಲನೆ ನಡೆಸಬೇಕಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಉಪಸಮಿತಿ ರಚಿಸಲಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.

‘ನಾಲ್ಕನೇ ಶನಿವಾರ ಸಹ ಸರ್ಕಾರಿ ನೌಕರರಿಗೆ ರಜೆ ನೀಡಬೇಕು ಎಂದು ಆರನೇ ವೇತನ ಆಯೋಗ ಶಿಫಾರಸು ಮಾಡಿದೆ. ಇಷ್ಟೆಲ್ಲ ರಜೆ ಇದ್ದೂ ಅದನ್ನು ಕೊಡಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

ಸಾರ್ವತ್ರಿಕ ರಜಾ ದಿನಗಳು

ದಿನಾಂಕ; ವಾರ; ರಜಾ ದಿನ

ಜ.15; ಮಂಗಳವಾರ; ಮಕರ ಸಂಕ್ರಾಂತಿ

ಜ.26; ಶನಿವಾರ; ಗಣರಾಜ್ಯೋತ್ಸವ

ಮಾರ್ಚ್ 4; ಸೋಮವಾರ; ಮಹಾಶಿವರಾತ್ರಿ

ಏಪ್ರಿಲ್‌ 6; ಶನಿವಾರ; ಯುಗಾದಿ

ಏ‍‍ಪ್ರಿಲ್‌ 17; ಬುಧವಾರ; ಮಹಾವೀರ ಜಯಂತಿ

ಏಪ್ರಿಲ್‌ 19; ಶುಕ್ರವಾರ; ಗುಡ್‌ ಫ್ರೈಡೆ

ಮೇ 1; ಬುಧವಾರ; ಕಾರ್ಮಿಕರ ದಿನಾಚರಣೆ

ಮೇ 7; ಮಂಗಳವಾರ; ಬಸವಜಯಂತಿ/ಅಕ್ಷಯ ತೃತೀಯ

ಜೂನ್‌ 5; ಬುಧವಾರ; ರಂಜಾನ್‌

ಆಗಸ್ಟ್‌ 12; ಸೋಮವಾರ; ಬಕ್ರೀದ್‌

ಆಗಸ್ಟ್‌ 15; ಗುರುವಾರ; ಸ್ವಾತಂತ್ರ್ಯ ದಿನಾಚರಣೆ

ಸೆಪ್ಟೆಂಬರ್‌ 2; ಸೋಮವಾರ; ಗಣೇಶ ಚತುರ್ಥಿ

ಸೆಪ್ಟೆಂಬರ್‌ 10; ಮಂಗಳವಾರ; ಮೊಹರಂ ಕಡೆ ದಿನ

ಸೆಪ್ಟೆಂಬರ್‌ 28; ಶನಿವಾರ; ಮಹಾಲಯ ಅಮವಾಸ್ಯೆ

ಅಕ್ಟೋಬರ್ 2; ಬುಧವಾರ; ಗಾಂಧಿ ಜಯಂತಿ

ಅಕ್ಟೋಬರ್‌ 7; ಸೋಮವಾರ; ಆಯುಧಪೂಜೆ

ಅಕ್ಟೋಬರ್‌ 8; ಮಂಗಳವಾರ; ವಿಜಯದಶಮಿ

ಅಕ್ಟೋಬರ್ 29; ಮಂಗಳವಾರ; ಬಲಿಪಾಡ್ಯಮಿ ದೀಪಾವಳಿ

ನವೆಂಬರ್‌ 1; ಶುಕ್ರವಾರ; ಕನ್ನಡ ರಾಜ್ಯೋತ್ಸವ

ನವೆಂಬರ್‌ 15; ಶುಕ್ರವಾರ; ಕನಕದಾಸ ಜಯಂತಿ

ಡಿಸೆಂಬರ್‌ 25; ಬುಧವಾರ; ಕ್ರಿಸ್‌ಮಸ್‌

* ಈ ಪಟ್ಟಿಯು ಭಾನುವಾರಗಳಂದು ಬರುವ ಅಂಬೇಡ್ಕರ್ ಜಯಂತಿ (ಏಪ್ರಿಲ್‌ 14), ವಾಲ್ಮೀಕಿ ಜಯಂತಿ (ಅಕ್ಟೋಬರ್‌ 13), ನರಕ ಚತುರ್ದಶಿ (ಅಕ್ಟೋಬರ್‌ 27) ಹಾಗೂ ಈದ್‌ ಮಿಲಾದ್‌ (ನವೆಂಬರ್‌ 10) ರಜಾ ದಿನಗಳನ್ನು ಒಳಗೊಂಡಿಲ್ಲ.

ಪರಿಮಿತ ರಜಾದಿನಗಳು

ಜ.1; ಮಂಗಳವಾರ; ನೂತನ ವರ್ಷಾರಂಭ

ಫೆ.14; ಗುರುವಾರ; ಮಾಧ್ವ ನವಮಿ

ಮಾ.20; ಬುಧವಾರ; ಹೋಳಿ ಹಬ್ಬ

ಏ.10; ಬುಧವಾರ; ದೇವರ ದಾಸಿಮಯ್ಯ ಜಯಂತಿ

ಏ.20; ಶನಿವಾರ; ಹೋಲಿ ಸ್ಯಾಟರ್‌ಡೆ/ಷಬ್‌–ಎ–ಬರಾತ್‌

ಮೇ 9; ಗುರುವಾರ; ಶಂಕರ ಜಯಂತಿ/ರಾಮಾನುಜ ಜಯಂತಿ

ಮೇ 18; ಶನಿವಾರ; ಬುದ್ಧ ಪೂರ್ಣಿಮೆ

ಮೇ 31; ಶುಕ್ರವಾರ; ಜುಮತ್‌ ಉಲ್‌ ವಿದಾ

ಜೂನ್‌ 1; ಶನಿವಾರ; ಷಬ್‌–ಎ–ಖದ್ರ್‌

ಆಗಸ್ಟ್‌ 9; ಶುಕ್ರವಾರ; ವರಮಹಾಲಕ್ಷ್ಮಿ ಹಬ್ಬ

ಆಗಸ್ಟ್ 23; ಶುಕ್ರವಾರ; ಶ್ರೀಕೃಷ್ಣ ಜನ್ಮಾಷ್ಟಮಿ

ಸೆಪ್ಟೆಂಬರ್‌ 11; ಬುಧವಾರ; ಋಗುಪಾಕರ್ಮ/ಓಣಂ

ಸೆಪ್ಟೆಂಬರ್‌ 12; ಗುರುವಾರ; ಅನಂತಪದ್ಮನಾಭ ವ್ರತ

ಸೆಪ್ಟೆಂಬರ್‌ 13; ಶುಕ್ರವಾರ; ಯಜುರುಪಾಕರ್ಮ/ನಾರಾಯಣಗುರು ಜಯಂತಿ

ಸೆಪ್ಟೆಂಬರ್‌ 17; ಮಂಗಳವಾರ; ವಿಶ್ವಕರ್ಮ ಜಯಂತಿ

ಅಕ್ಟೋಬರ್‌ 18; ಶುಕ್ರವಾರ; ತುಲಾ ಸಂಕ್ರಮಣ

ನವೆಂಬರ್‌ 12; ಮಂಗಳವಾರ; ಗುರುನಾನಕ್‌ ಜಯಂತಿ

ಡಿಸೆಂಬರ್‌ 12; ಗುರುವಾರ; ಹುತ್ತರಿ ಹಬ್ಬ

ಡಿಸೆಂಬರ್‌ 24; ಮಂಗಳವಾರ; ಕ್ರಿಸ್‌ಮಸ್‌ ಈವ್‌

*ರಾಮನವಮಿ ಎರಡನೇ ಶನಿವಾರದಂದು (ಏಪ್ರಿಲ್‌ 13), ಸೌರಮಾನ ಯುಗಾದಿ ಭಾನುವಾರ (ಏಪ್ರಿಲ್‌ 14) ಹಾಗೂ ಸ್ವರ್ಣಗೌರಿ ವ್ರತ ಸಾರ್ವಜನಿಕ ರಜಾದಿನದಲ್ಲೇ (ಸೆಪ್ಟೆಂಬರ್‌ 2) ಬರುತ್ತವೆ. ಹೀಗಾಗಿ, ಈ ಪಟ್ಟಿಯಲ್ಲಿ ಸೇರಿಲ್ಲ.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು