30 ವರ್ಷ ಸರ್ಕಾರಿ ನೌಕರಿ ಮಾಡಿದರೂ ನಿವೃತ್ತಿ ವೇತನ

7
ಸಿ,ಡಿ ವೃಂದಗಳ ನೌಕರರಿಗೆ ವೈದ್ಯಕೀಯ ಭತ್ಯೆ ಹೆಚ್ಚಳ

30 ವರ್ಷ ಸರ್ಕಾರಿ ನೌಕರಿ ಮಾಡಿದರೂ ನಿವೃತ್ತಿ ವೇತನ

Published:
Updated:

ಬೆಂಗಳೂರು: ಇನ್ನು ಮುಂದೆ 30 ವರ್ಷ ಕರ್ತವ್ಯ ನಿರ್ವಹಿಸಿದ ಸರ್ಕಾರಿ ನೌಕರರಿಗೆ ಪೂರ್ಣ ಪ್ರಮಾಣದ ನಿವೃತ್ತಿ ಸೌಲಭ್ಯ ಸಿಗಲಿದೆ. 

ಸರ್ಕಾರಿ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಸಂಬಂಧಗರಿಷ್ಠ ಅರ್ಹತಾದಾಯಕ ಕರ್ತವ್ಯ ಅವಧಿಯನ್ನು 33 ವರ್ಷದಿಂದ 30 ವರ್ಷಕ್ಕೆ ಇಳಿಸುವಂತೆ ಆರನೇ ವೇತನ ಆಯೋಗ ಶಿಫಾರಸು ಮಾಡಿತ್ತು. ಈ ನಿಯಮ ಜ. 1ರಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ.

‘ಸಿ’ ಮತ್ತು ‘ಡಿ’ ವೃಂದದ ನೌಕರರ ವೈದ್ಯಕೀಯ ಭತ್ಯೆಯನ್ನು ತಿಂಗಳ ₹ 100ರಿಂದ ₹ 200ಕ್ಕೆ ಹೆಚ್ಚಿಸಲಾಗಿದೆ. ಎಲ್ಲ ಸರ್ಕಾರಿ ನೌಕರರಿಗೆ ನೀಡಲಾಗುವ ಬಡ್ಡಿರಹಿತ ಹಬ್ಬದ ಮುಂಗಡ ಮೊತ್ತವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿಯ ಪ್ರಯಾಣ ಭತ್ಯೆ ಮತ್ತು ಸಮವಸ್ತ್ರ ದರಗಳ ಭತ್ಯೆಯನ್ನೂ ಪರಿಷ್ಕರಿಸಲಾಗಿದೆ.

ನೌಕರರು ಕೆಲಸಕ್ಕೆ ಸೇರಿದ ತಿಂಗಳಿನಲ್ಲಿ ವಾರ್ಷಿಕ ವೇತನ ಬಡ್ತಿ ನೀಡಲಾಗುತ್ತಿತ್ತು. ಅದನ್ನು ಪರಿಷ್ಕರಿಸಿ, ಜ. 1ಮತ್ತು ಜುಲೈ 1ರಂದು ವಾರ್ಷಿಕ ವೇತನ ಬಡ್ತಿಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ.

ವಾರದಲ್ಲಿ ಐದು ದಿನಕ್ಕೆ ಇಳಿಸಬೇಕು ಅಥವಾ ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ನೀಡಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.

Tags: 

ಬರಹ ಇಷ್ಟವಾಯಿತೆ?

 • 19

  Happy
 • 6

  Amused
 • 3

  Sad
 • 2

  Frustrated
 • 10

  Angry

Comments:

0 comments

Write the first review for this !