ಗುರುವಾರ , ನವೆಂಬರ್ 21, 2019
24 °C

ಸರ್ಕಾರಿ ನೌಕರರ ಶವಸಂಸ್ಕಾರ ಭತ್ಯೆ ₹ 25 ಸಾವಿರಕ್ಕೆ ಹೆಚ್ಚಳ?

Published:
Updated:

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಮೃತಪಟ್ಟರೆ ನೀಡಲಿರುವ ಶವಸಂಸ್ಕಾರ ಭತ್ಯೆಯನ್ನು ಈಗಿನ ₹ 5 ಸಾವಿರದಿಂದ ₹ 25 ಸಾವಿರಕ್ಕೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.

₹ 5 ಸಾವಿರದಲ್ಲಿ ಶವಸಂಸ್ಕಾರವನ್ನು ಗೌರವಯುತವಾಗಿ ಮಾಡಲು ಸಾಧ್ಯವಿಲ್ಲ. ಭತ್ಯೆಯನ್ನು ₹25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ನೌಕರರ ಸಂಘವು ಈಚೆಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿ ಮುಖ್ಯಮಂತ್ರಿ ಅವರು ಈ ಸೂಚನೆ ನೀಡಿದ್ದಾರೆ.

10 ವರ್ಷದ ಬೇಡಿಕೆ: ‘ನೌಕರರ ಹತ್ತು ವರ್ಷಗಳ ಬೇಡಿಕೆ ಇದಾಗಿತ್ತು. ಮುಖ್ಯಮಂತ್ರಿ ಇದಕ್ಕೆ ತಕ್ಷಣ ಸ್ಪಂದಿಸಿದ್ದರಿಂದ ಖುಷಿಯಾಗಿದೆ. ಸಂಘದ ಇತರೆ ಬೇಡಿಕೆಗಳಿಗೂ ಸ್ಪಂದಿಸುವ ವಿಶ್ವಾಸ ಇದೆ’ ಎಂದು ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)