ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿಕಟ್ಟಾದ ವಿದೇಶಿ ಖರ್ಜೂರ

ಲಿಂಗಸುಗೂರು: ಎಲ್ಲೆಡೆ ಈದ್‌–ಉಲ್‌–ಫಿತ್ರ್ ಸಂಭ್ರಮ
Last Updated 16 ಜೂನ್ 2018, 10:35 IST
ಅಕ್ಷರ ಗಾತ್ರ

ಲಿಂಗಸುಗೂರು: ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಸ್ಥಳೀಯ ಮತ್ತು ಸುತ್ತಮುತ್ತಲಿನ ರಾಜ್ಯಗಳ ವಿವಿಧ ತಳಿಯ ಖರ್ಜೂರ, ಹಣ್ಣುಗಳ ಮಾರಾಟ ಸಾಮಾನ್ಯ. ರಂಜಾನ್‌ ಆಚರಣೆ ವೇಳೆ ದೇಶ, ವಿದೇಶದಿಂದ ಖರ್ಜೂರ್‌ ಮತ್ತು ಇತರೆ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಅವುಗಳ ಭರ್ಜರಿ ವ್ಯಾಪಾರವೂ ಆಗುತ್ತದೆ.

ಗುಜರಾ್‌, ಮಹಾರಾಷ್ಟ್ರದ ಖರ್ಜೂರ್‌ ಸಾಮಾನ್ಯವಾಗಿ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಸದಾ ಸಿಗುತ್ತದೆ. ಆದರೆ, ರಂಜಾನ್‌ ಆರಂಭದಿಂದ ಅಂತ್ಯದವರೆಗೆ ಕಿನ್ನ್ಯಾ, ಆಸ್ಟ್ರೇಲಿಯಾ, ಸೌದಿ ಅರೇಬಿ, ಕುವೈತ್‌, ಇರಾನ್‌ ಸೇರಿದಂತೆ ದೇಶ ವಿದೇಶಗಳ ವೈವಿಧ್ಯಮಯ ಖರ್ಜೂರ ವಿವಿಧ ಕಂಪೆನಿಗಳ ಹೆಸರಿನಲ್ಲಿ ಬರುತ್ತವೆ. ₹ 200 ರಿಂದ ₹ 250 ರಂತೆ (ಪ್ಯಾಕೆಟ್‌) ಭರ್ಜರಿ ಮಾರಾಟವಾಗುತ್ತವೆ.

ಖರ್ಜೂರ್‌ ಜೊತೆಗೆ ದೇಶಿಯ ವೈವಿಧ್ಯಮಯ ಹಣ್ಣುಗಳ ಬೇಡಿಕೆ ಜೊತೆಗೆ ಚೀನಾ, ಆಸ್ಟ್ರೇಲಿಯಾ, ಅಮೆರಿಕ, ದಕ್ಷಿಣ ಆಪ್ರಿಕಾ, ಟರ್ಕಿ ಸೇರಿದಂತೆ ಇತರೆ ದೇಶಗಳ ವೈವಿಧ್ಯ ಮಯ ಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುತ್ತಿದ್ದು ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಖರ್ಜೂರ್‌, ಹಣ್ಣುಗಳನ್ನು ನೀಡಲು ಆಗುತ್ತಿಲ್ಲ. ಸ್ಥಳೀಯ ಹಣ್ಣು, ಖರ್ಜೂರ್‌ಗೆ ಸಿಗುವಷ್ಟು ಲಾಭ ವಿದೇಶಿ ಖರ್ಜೂರ್‌, ಹಣ್ಣಿಗೆ ಸಿಗುವುದಿಲ್ಲ ಎಂದು ಜಾವೀದ್‌ ಹೇಳುತ್ತಾರೆ.

ದೇಶ ವಿದೇಶಗಳ ವಿವಿಧ ಬಗೆಯ ಸೇಬು, ಮೋಸಂಬಿ, ದಾಳಿಂಬೆ, ಕಲ್ಲಂಗಡಿ, ಬಾಳೆಹಣ್ಣು, ಏಲಕ್ಕಿ ಬಾಳೆಹಣ್ಣು, ಕಿವಿ, ಆರೆಂಜ್‌, ಚೆರ್ರಿ ಫ್ರೂಟ್‌, ದ್ರಾಕ್ಷಿ, ಮಾವು, ನೀರಲೆ, ಚಿಕ್ಕು, ಅಂಜೂರು, ಪೇರಲ, ಸೀತಾಫಲ, ಸ್ಟ್ರಾಬೇರಿ, ಪಪ್ಪಾಯಿ, ಫೈನಾಪಲ್‌ ಸೇರಿದಂತೆ ಇತರೆ ಹಣ್ಣುಗಳ ಮಾರಾಟ ಭರ್ಜರಿ ನಡೆದಿದೆ. ಎರಡು ವರ್ಷಗಳಿಂದ ವಿದೇಶ ಖರ್ಜೂರ್‌, ಹಣ್ಣು ಮಾರುತ್ತಿದ್ದೇವೆ ಎಂದು ಮಹಮ್ಮದ್‌ ರಫಿ ಹೇಳಿದರು.

ಪೌಷ್ಟಿಕಾಂಶವುಳ್ಳ ಹಣ್ಣು, ಖರ್ಜೂರ್‌ ಸೇವನೆ ಸಾಮಾನ್ಯ. ಸ್ಥಳೀಯ ಹಣ್ಣು, ಖರ್ಜೂರ್‌ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ವಿದೇಶದ ವೈವಿಧ್ಯಮಯ ಹಣ್ಣು, ಖರ್ಜೂರ್‌ ಮಾರುಕಟ್ಟೆಗೆ ಬರುತ್ತಿರುವುದು ಖುಷಿ ತಂದಿದೆ  ಎಂದು ರಮಾಬಾಯಿ ಹರ್ಷ ಹಂಚಿಕೊಂಡರು.

ಸಾಮಾನ್ಯ ದಿನಗಳಲ್ಲಿ ದೇಸಿ ಹಣ್ಣು, ಖರ್ಜೂರ ಮಾರಾಟ ಮಾಡಲಾಗುತ್ತದೆ. ಈದ್‌–ಉಲ್‌–ಫಿತ್ರ್ ಹಬ್ಬದಲ್ಲಿ ಮಾತ್ರ ವಿದೇಶಿ ಮೂಲದ ಹಣ್ಣು–ಖರ್ಜೂರಗೆ ಬೇಡಿಕೆ ಹೆಚ್ಚು ಇರುತ್ತದೆ‌
– ಮಹಮ್ಮದ್‌ ರಫಿ,  ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT