ಗುರುವಾರ , ನವೆಂಬರ್ 14, 2019
18 °C

ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಯುವಕರಿಂದ ಹಲ್ಲೆ

Published:
Updated:
Prajavani

ಕುಶಾಲನಗರ: ಇಲ್ಲಿನ ಬೈಚನಹಳ್ಳಿ ಬ್ಲೂಮೂನ್ ಪೆಟ್ರೋಲ್ ಬಂಕ್‌ನಲ್ಲಿ ಸೋಮವಾರ ರಾತ್ರಿ ಐವತ್ತು ರೂಪಾಯಿಗೆ ಸ್ವೈಪಿಂಗ್ ನಿರಾಕರಿಸಿದ ಸಿಬ್ಬಂದಿ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.

ಸೂರ್ಯ ಹಲ್ಲೆಗೆ ಒಳಗಾದ ವ್ಯಕ್ತಿ. ಸೋಮವಾರ ರಾತ್ರಿ ಪೆಟ್ರೋಲ್ ಬಂಕ್ ಗೆ ಬೈಕ್‌ನಲ್ಲಿ ಬಂದು ಬಂದ ಯುವಕರ ತಂಡ ₹50 ಗೆ ಪೆಟ್ರೋಲ್ ಹಾಕಿಸಿಕೊಂಡು ಎಟಿಎಂ ಕಾರ್ಡ್ ನೀಡಿದ್ದಾರೆ. ಆದರೆ ಬಂಕ್ ಸಿಬ್ಬಂದಿ ಸೂರ್ಯ ₹50 ರೂಪಾಯಿ ಸ್ವೈಪಿಂಗ್ ಮಾಡೋಕೆ ಆಗಲ್ಲ ಎಂದು ನಿರಾಕರಿಸಿ ಹಣ ನೀಡುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಹಾಗೂ ಆತನ ಸ್ನೇಹಿತರು ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಪಟ್ಟಣದ ತಾವರೆಕೆರೆ ಬಳಿಯ ವರ್ಕ್ಸ್ ಶಾಪ್ ಸಿಬ್ಬಂದಿ ಜೈಹೀರ್ ಹಾಗೂ ಆತನ ಸ್ನೇಹಿತರೇ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಸೂರ್ಯ ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಯುವಕರ ಪುಂಡಾಟ, ಹಲ್ಲೆಯ ವಿಡಿಯೊ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪ್ರತಿಕ್ರಿಯಿಸಿ (+)