ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ, ಹಣ್ಣಿಗೂ ಜಿಎಸ್‌ಟಿ?

Last Updated 25 ಡಿಸೆಂಬರ್ 2019, 2:37 IST
ಅಕ್ಷರ ಗಾತ್ರ

ನವದೆಹಲಿ: ಹಣ್ಣು, ತರಕಾರಿ, ಮೊಟ್ಟೆ, ಮಾಂಸ, ಮೀನು–ಹೀಗೆ ಜಿಎಸ್‌ಟಿ ವ್ಯಾಪ್ತಿಗೆ ಬರದೇ ಇರುವ ಉತ್ಪನ್ನಗಳಿಗೂ ತೆರಿಗೆ ವಿಧಿಸುವಂತೆ ಅಧಿಕಾರಿಗಳ ಸಮಿತಿ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಪರಿಹಾರ ಸೆಸ್‌ ಸಂಗ್ರಹದಲ್ಲಿ ₹ 60 ಸಾವಿರ ಕೋಟಿ ಕೊರತೆ ಬೀಳುವ ಅಂದಾಜು ಮಾಡಲಾಗಿದೆ. ಇದನ್ನು ತುಂಬಿಕೊಳ್ಳಲು ವಿನಾಯ್ತಿ ಕೈಬಿಡುವುದರಜತೆಗೆ ಕೆಲವು ಸರಕುಗಳ ತೆರಿಗೆಯನ್ನೂ ಹೆಚ್ಚಿಸಬಹುದು ಎಂದು ಸಮಿತಿಯು ಸಲಹೆ ನೀಡಿದೆ.

ಡಿಸೆಂಬರ್‌ 18ರಂದು ನಡೆದ ಜಿಎಸ್‌ಟಿ ಮಂಡಳಿಯ ಸಭೆಗೆ ಸಮಿತಿಯು ತನ್ನವರದಿ ಸಲ್ಲಿಸಿದೆ. ಶೇ 5ರ ತೆರಿಗೆ ವ್ಯಾಪ್ತಿಯಲ್ಲಿರುವ ಸರಕುಗಳನ್ನು ಶೇ 12ಕ್ಕೆ ಮತ್ತು ಶೇ 12ರಲ್ಲಿರುವ ಸರಕುಗಳನ್ನು ಶೇ 18ಕ್ಕೆ ಹೆಚ್ಚಿಸುವಂತೆ ಹಾಗೂಶೇ 28ರಲ್ಲಿದ್ದ ಕೆಲವು ಸರಕುಗಳನ್ನು ಶೇ 18ಕ್ಕೆ ಇಳಿಕೆ ಮಾಡಿರುವ ಕುರಿತು ಮರುಪರಿಶೀಲನೆ ನಡೆಸವಂತೆಯೂ ಸಲಹೆ ನೀಡಿದೆ.

ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವರದಿಯ ಬಗ್ಗೆ ಚರ್ಚೆ ನಡೆಯಲಿದ್ದು, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT