ಕಾಂಗ್ರೆಸ್‌ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ

ಸೋಮವಾರ, ಏಪ್ರಿಲ್ 22, 2019
31 °C

ಕಾಂಗ್ರೆಸ್‌ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ

Published:
Updated:

ಮೈಸೂರು: ‘ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ಭಿತ್ತಿಪತ್ರಗಳಲ್ಲಿ ಜೆಡಿಎಸ್‌ ಶಾಸಕರ ಭಾವಚಿತ್ರ ಹಾಕಿಲ್ಲ. ಈ ಕೋಪದಿಂದ ನಮ್ಮ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಹೋಗಬೇಡಿ ಎಂದರು. ಕಾಂಗ್ರೆಸ್‌ ವರ್ತನೆಯಿಂದ ಬೇಸರವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇಲ್ಲಿ ಸೋಮವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ಯಾವುದೇ ಅಸಮಾಧಾನವಿಲ್ಲ. ಹಲವು ಕಾರಣಗಳಿಂದ ನಾನು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಜಿದ್ದಾಜಿದ್ದಿ ಇರುವುದು ನಿಜ’ ಎಂದರು.

‘ಎಚ್‌.ಡಿ.ದೇವೇಗೌಡ, ಪ್ರಜ್ವಲ್‌ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ವಿರುದ್ಧವಾಗಿ ಕೆಲಸ ಮಾಡುವುದನ್ನು ಕಾಂಗ್ರೆಸ್‌ ಮುಖಂಡರು ತಡೆಯಬೇಕು. ಇನ್ನೂ ಕಾಲ ಮಿಂಚಿಲ್ಲ’ ಎಂದು ಹೇಳಿದರು.

ಈ ನಡುವೆ, ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್ ಪರ ಪ್ರಚಾರ ನಡೆಸುವಂತೆ ಜಿ.ಟಿ.ದೇವೇಗೌಡ ಅವರಿಗೆ ಕಾಂಗ್ರೆಸ್‌ ಮುಖಂಡರು ಆಹ್ವಾನ ನೀಡಿದರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !