ಮಂಗಳವಾರ, ನವೆಂಬರ್ 19, 2019
28 °C

ಗುಲಬರ್ಗಾ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಧ್ಯಯನ ಪೀಠ ಸ್ಥಾಪನೆ: ಸಿಎಂ

Published:
Updated:

ಕಲಬುರ್ಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ‌ಸಂಬಂಧಿಸಿದಂತೆ 371 (ಜೆ) ಕಲಂನ ವಿಶೇಷ ಕೋಶದ ಕಚೇರಿ ಪ್ರಸ್ತುತ ಬೆಂಗಳೂರಿನಲ್ಲಿದ್ದು ಅದರ ಶಾಖಾ ಕಚೇರಿಯನ್ನು ಕಲಬುರ್ಗಿಯಲ್ಲಿ ಆರಂಭಿಸಲಾಗುವುದು‌ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. 

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಹೈದರಾಬಾದ್ ‌ಕರ್ನಾಟಕ ಭಾಗದ ಸಮಗ್ರ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ: ಹೆಸರಷ್ಟೇ ಸಾಕೆ?

371 (ಜೆ) ಕಲಂಗೆ ತಿದ್ದುಪಡಿ ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗಳಲ್ಲಿ ನೇಮಕಾತಿ ಹಾಗೂ ಮುಂಬಡ್ತಿಯನ್ನು ನ್ಯಾಯಬದ್ಧವಾಗಿ ಒದಗಿಸಲಾಗುವುದು ಎಂದರು.

LIVE: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಪ್ರತಿಕ್ರಿಯಿಸಿ (+)