ಬುಧವಾರ, ಜನವರಿ 22, 2020
16 °C

 VIDEO| ಜೆಡಿಎಸ್ ನಾಯಕ ಕುಮಾರಸ್ವಾಮಿ ಷಷ್ಟ್ಯಬ್ದಿಯ ವಿಡಿಯೊ ವೈರಲ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್ ನಾಯಕ ಎಚ್‌.ಡಿ ಕುಮಾರಸ್ವಾಮಿ ಷಷ್ಟ್ಯಬ್ದಿ ಆಚರಿಸಿಕೊಂಡಿರುವ  ಟಿಕ್‌ಟಾಕ್‌ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಕುಮಾರಸ್ವಾಮಿ ನಿವಾಸದಲ್ಲಿ ಶುಕ್ರವಾರ  ಷಷ್ಟ್ಯಬ್ದಿ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಎಚ್‌.ಡಿ ದೇವೇಗೌಡ ದಂಪತಿ, ಅವರ ಕುಟುಂಬಸ್ಥರು, ಜೆಡಿಎಸ್ ಶಾಸಕರು, ಮುಖಂಡರು, ಹಾಗೂ ಅಭಿಮಾನಿಗಳು ಹಾಜರಿದ್ದರು. 

ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರನ್ನು ಕೂರಿಸಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ಈ ವಿಧಿವಿಧಾನಗಳ ಒಂದು ಟಿಕ್‌ಟಾಕ್‌ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಟಿಕ್‌ಟಾಕ್‌ ವಿಡಿಯೊವನ್ನು ಅಭಿಮಾನಿಗಳು ಮಾಡಿದ್ದಾರೆ ಎನ್ನಲಾಗಿದೆ.  

1959 ಡಿಸೆಂಬರ್ 16ರಂದು ಕುಮಾರಸ್ವಾಮಿ ಜನಿಸಿದ್ದಾರೆ. ಇನ್ನು ಎರಡು ದಿನಗಳಲ್ಲಿ ಅವರು 60ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು