ಮಂಗಳವಾರ, ನವೆಂಬರ್ 12, 2019
28 °C

ವಿಶ್ವನಾಥ್‌ ಸಚಿವರಾಗುತ್ತಾರೆ: ಜಿ.ಟಿ.ದೇವೇಗೌಡ

Published:
Updated:

ಹುಣಸೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಚ್‌.ವಿಶ್ವನಾಥ್ ಅವರಿಗೆ ಭವಿಷ್ಯದಲ್ಲಿ ಸಚಿವರಾಗುವ ಅವಕಾಶ ಇದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಧರ್ಮಾಪುರ ಗ್ರಾಮದಲ್ಲಿ ಭಾನುವಾರ ಮಾತನಾಡಿ, 'ವಿಶ್ವನಾಥ್‌ ಅವರು ರಾಜಕೀಯ ಚತುರತೆ ಹೊಂದಿದ್ದಾರೆ. ಅವರ ಸಲಹೆಯನ್ನು ಪಕ್ಷದ ವರಿಷ್ಠರು, ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವವರು ಪಡೆಯದೆ ಅವಮಾನಿಸಿದರು’ ಎಂದರು.

ಈಚೆಗೆ ಬಿಜೆಪಿ ಸೇರಿರುವ ಸಿ.ಎಚ್‌.ವಿಜಯಶಂಕರ್‌, ಅನರ್ಹ ಶಾಸಕ ವಿಶ್ವನಾಥ್‌, ಜಿ.ಟಿ.ದೇವೇಗೌಡ, ಅವರ ಪುತ್ರ ಜಿ.ಡಿ.ಹರೀಶ್‌ ಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಪ್ರತಿಕ್ರಿಯಿಸಿ (+)