ಬುಧವಾರ, ಆಗಸ್ಟ್ 4, 2021
21 °C

ಟಿಕೆಟ್ ತಪ್ಪಿದ್ದಕ್ಕೆ ವಿಶ್ವನಾಥ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿಶ್ವನಾಥ್‌ ರಾಜಕಾರಣದಲ್ಲಿ ಇರಬಾರದು ಎಂಬ ಮನಸ್ಥಿತಿಯವರಿಂದಾಗಿಯೇ ಟಿಕೆಟ್ ತಪ್ಪಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಷಡ್ಯಂತ್ರ ನಡೆಸಿದ್ದಾರೆ’ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ದೂರಿದರು.

‘ನನಗೂ ಟಿಕೆಟ್‌ ಸಿಗಬೇಕಿತ್ತು. ಕೋರ್‌ ಕಮಿಟಿ ನನ್ನ ಹೆಸರೂ ಸೇರಿ ನಾಲ್ವರ ಹೆಸರುಗಳನ್ನು ಕಳಿಸಿತ್ತು. ಆದರೆ, ದೆಹಲಿಯಿಂದ ಪಟ್ಟಿ ವಾಪಸ್‌ ಬಂದಾಗ ನನ್ನ ಹೆಸರು ಕೈಬಿಡಲಾಗಿದೆ’ಎಂದು ಅವರು ಹೇಳಿದರು.

‘ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಅವರೂ ಕೂಡ ಏನೋ ವ್ಯತ್ಯಾಸವಾಗಿದೆ. ಸರಿಪಡಿಸೋಣ. ಏನಾದರೂ ಮಾಡೋಣ ಎಂಬ ಭರವಸೆ ನೀಡಿದ್ದಾರೆ’ ಎಂದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು