ಬಿಜೆಪಿ ನಾಯಕರು ಪತನದ ವ್ಯಸನಿಗಳು: ಎಚ್‌.ವಿಶ್ವನಾಥ್‌

7

ಬಿಜೆಪಿ ನಾಯಕರು ಪತನದ ವ್ಯಸನಿಗಳು: ಎಚ್‌.ವಿಶ್ವನಾಥ್‌

Published:
Updated:

ಮಡಿಕೇರಿ: ‘ಮೈತ್ರಿ ಸರ್ಕಾರ ಬೀಳಿಸುವ ಪ್ರಯತ್ನದಲ್ಲಿರುವ ಬಿಜೆಪಿ ನಾಯಕರು ಪತನದ ವ್ಯಸನಿಗಳು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಇಲ್ಲಿ ಶನಿವಾರ ಟೀಕಿಸಿದರು.

‘ಹೆಣ್ಣು, ಮದ್ಯದ ವ್ಯಸನಿಗಳು ಇರುತ್ತಾರೆ. ಅದರಂತೆಯೇ ಬಿಜೆಪಿಯವರು ಪತನದ ವ್ಯಸನಿಗಳು. ಸರ್ಕಾರ ಉರುಳಿಸುವುದರಲ್ಲಿ ಅನುಭವಸ್ಥರು. ಶಾಂತಿಯ ಸಂಕೇತ ಕಮಲ. ಆದರೆ, ಪಕ್ಷದ ಚಿಹ್ನೆಯನ್ನೇ ಬಿಜೆಪಿ ಮುಖಂಡರು ಮಲಿನ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ಮುಖಂಡರ ಹುನ್ನಾರ ನಡೆಯುವುದಿಲ್ಲ. ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡುತ್ತೇವೆ. ಎರಡು ಪಕ್ಷಗಳ (ಕಾಂಗ್ರೆಸ್‌– ಜೆಡಿಎಸ್‌) ರಾಜ್ಯ ಘಟಕದ ಅಧ್ಯಕ್ಷರಿಗೆ ಸಮನ್ವಯ ಸಮಿತಿಯಲ್ಲಿ ಸ್ಥಾನ ನೀಡುವ ಕುರಿತು ಮುಂದಿನ ವಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಕಾಂಗ್ರೆಸ್‌ನಿಂದ ನನಗೆ ಯಾವುದೇ ಅನ್ಯಾಯ ಆಗಿರಲಿಲ್ಲ. ಕೆಲವು ವ್ಯಕ್ತಿಗಳಿಂದ ಕಿರುಕುಳ ಅನುಭವಿಸಿದ್ದೆ’ ಎಂದು ನುಡಿದರು.

ಭೂಕುಸಿತದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ಅಭಿವೃದ್ಧಿಗೆ ‘ಮರು ನಿರ್ಮಾಣ ಪ್ರಾಧಿಕಾರ’ ರಚಿಸುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ರಾಜಕೀಯ ರಹಿತವಾಗಿ ಕೊಡಗಿನ ಅಭಿವೃದ್ಧಿಗೆ ಶ್ರಮಿಸಬೇಕು. ಬಿಜೆಪಿ ನಾಯಕರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್‌ ಘೋಷಣೆಗೆ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !