ಹ್ಯಾಕಥಾನ್‌: ಸಂಭ್ರಮಿಸಿದ ವಿದ್ಯಾರ್ಥಿಗಳು

7

ಹ್ಯಾಕಥಾನ್‌: ಸಂಭ್ರಮಿಸಿದ ವಿದ್ಯಾರ್ಥಿಗಳು

Published:
Updated:
Deccan Herald

ಬೆಂಗಳೂರು: ಪಿಇಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ‘ಇನ್‌ಜೀನಿಯಸ್‌’ ಹ್ಯಾಕಥಾನ್‌ ಸ್ಪರ್ಧೆಗಳು ನಡೆದವು. 

ಹ್ಯಾಕಥಾನ್‌ಗೆ ಸಹಯೋಗ ನೀಡಿದ್ದ  ಪಾಲೊ ಅಲ್ಟೊ ನೆಟ್‌ವರ್ಕ್ಸ್‌, ವಾಲ್‌ಮಾರ್ಟ್‌ ಲ್ಯಾಬ್ಸ್‌, ನ್ಯೂಟನಿಕ್ಸ್‌, ಮಿಟ್ಟರ್‌.ಐಒ, ಅಸ್ಪೆಕ್ ಸ್ಕೈರ್‌, ಮೊಜಿಲ್ಲಾ ಇಂಡಿಯಾದಂತಹ ಕಂಪನಿಗಳು ಒಡ್ಡಿದ್ದ ತಾಂತ್ರಿಕ ಸವಾಲುಗಳನ್ನು ವಿದ್ಯಾರ್ಥಿಗಳು ಬಿಡಿಸಿದರು. ಕಾರ್ಯಕ್ರಮದಲ್ಲಿದ್ದ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. 

ಅಸ್ಪೆಕ್ ಸ್ಕೈರ್‌ ಕಂಪನಿಯ ಪ್ರತಿನಿಧಿಗಳು ತೋರಿಸಿಕೊಟ್ಟ ಡ್ರೋನ್‌ ಕ್ಯಾಮೆರಾ ಫೋಟೊಗ್ರಫಿ ವಿದ್ಯಾರ್ಥಿಗಳ ಗಮನ ಸೆಳೆಯಿತು. ಒಂದಿಷ್ಟು ಮೋಜನ್ನು ನೀಡಿತು. ಸಾಮಾಜಿಕ ಮಾಧ್ಯಮದ ಕುರಿತ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟಿ–ಶರ್ಟ್‌, ಪೆನ್ ಡ್ರೈವ್‌ ಮತ್ತು ಹೆಡ್‌ಸೆಟ್‌ಗಳನ್ನು ಬಹುಮಾನವಾಗಿ ನೀಡಲಾಯಿತು. 

ಹ್ಯಾಕಥಾನ್‌ನಲ್ಲಿ ಆರ್‌ವಿಸಿಇ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರೆ, ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಬಹುಮಾನದ ಒಟ್ಟು ಮೊತ್ತ ₹ 1 ಲಕ್ಷ ಆಗಿತ್ತು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !