ಬೇಳೂರು ಸವಾಲು ಸ್ವೀಕರಿಸಿದ ಹಾಲಪ್ಪ

7
‘ಸಿಗಂದೂರು ಚೌಡೇಶ್ವರಿ ಮೇಲೆ ಆಣೆ ಮಾಡಲಿ’

ಬೇಳೂರು ಸವಾಲು ಸ್ವೀಕರಿಸಿದ ಹಾಲಪ್ಪ

Published:
Updated:
Deccan Herald

ಶಿವಮೊಗ್ಗ: ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಯನ್ನು ಮುಚ್ಚಿ ಹಾಕಿಲ್ಲ ಎಂದು ಸಿಗಂದೂರು ದೇವಿಯ ಮೇಲೆ ಮಾಡಲಿ ಎಂದು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಬೇಳೂರು ಈಚೆಗೆ ಹಾಕಿದ್ದ ಸವಾಲನ್ನು ಶಾಸಕ ಎಚ್. ಹಾಲಪ್ಪ ಹರತಾಳು ಸ್ವೀಕರಿಸಿದ್ದಾರೆ.

‘ಬೇಳೂರು ಬಯಸಿದ್ದಲ್ಲಿ ನಾನು ಪತ್ನಿ ಸಮೇತ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಬಂದು, ಅತ್ಯಾಚಾರ ಆರೋಪದಲ್ಲಿ ದೋಷಮುಕ್ತನಾಗಿದ್ದೇನೆ. ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮಾಜಕ್ಕೆ ಸೇರಿದೆ ಎಂದು ಬಂಗಾರಪ್ಪ ಅವರು ನನ್ನ ಬಳಿ ಹೇಳಿರುವ ಬಗ್ಗೆ ದೇವಿಯ ಮೇಲೆ ಆಣೆ ಮಾಡಿ ಹೇಳಲು ಸಿದ್ಧನಾಗಿದ್ದೇನೆ. ಹಾಗೆಯೇ ನಾನು ದೇವಿಯ ಮುಂದೆ ಒಂದು ಪಟ್ಟಿಯನ್ನ ಬೇಳೂರು ಗೋಪಾಲಕೃಷ್ಣ ಅವರಿಗೆ ನೀಡುವೆ. ಆ ಪಟ್ಟಿಯಲ್ಲಿ ಇರುವರೊಂದಿಗೆ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪ್ರಮಾಣ ಮಾಡಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿ ಸವಾಲು ಹಾಕಿದರು.

‘ಬೇಳೂರು ಈ ವಿಚಾರದಲ್ಲಿ ಆಣೆ ಮಾಡಿದ್ರೆ ಮಾತ್ರ ಉತ್ತರ ನೀಡುವೆ.  ಆಣೆ ಮಾಡಲು ಅವರ ಪತ್ನಿ ಮತ್ತು ಮಧು ಬಂಗಾರಪ್ಪ ಅವರನ್ನ ಸಾಕ್ಷಿಯಾಗಿ ಕರೆದುಕೊಂಡು ಬರಲಿ. ಒಂದು ವೇಳೆ ಬೇಳೂರು ಬಾರದಿದ್ದರೆ ನನ್ನ ಮೇಲೆ ಅವರು ಮಾಡುವ ಆರೋಪಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಬೇಳೂರು ಒಬ್ಬ ಪಲಾಯನವಾದಿಯಾಗಲಿದ್ದಾರೆ’ ಎಂದು ಛೇಡಿಸಿದರು.

‘ಲೈಂಗಿಕ ಆರೋಪವನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದ್ದು, ಮಾನಸಿಕವಾಗಿ ಅವರೊಬ್ಬ ಆರೋಪಿ ಎಂದು ಹೇಳಿಕೆ ನೀಡಿದ್ದಾರೆ. ಇದು ಮಾಧ್ಯಮದಲ್ಲಿ ಬಿಂಬಿತವಾಗಿದೆ. ಇದು ನ್ಯಾಯಾಲಯದ ಉಲ್ಲಂಘನೆಯಾಗಲಿದೆ ಎಂಬುದು ನನ್ನ ತಿಳಿವಳಿಕೆ. ಈ ಕುರಿತು ವಕೀಲರನ್ನ ಸಂಪರ್ಕಿಸಿ, ಇಂತಹ ಆರೋಪದ ಬಗ್ಗೆಯೂ ಬೇಳೂರು ಅವರಿಗೆ ನೋಟಿಸ್ ನೀಡಲಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !