ಸೋಮವಾರ, ಡಿಸೆಂಬರ್ 9, 2019
20 °C

ಹಂಪಿಯಲ್ಲಿ ಬ್ಯಾಟರಿಚಾಲಿತ ವಾಹನ ಪಲ್ಟಿ, ಆರು ಜನ ಪ್ರವಾಸಿಗರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಟರಿ ವಾಹನದ ಟೈರ್‌ಗಳು ಸವೆದು ಹೋಗಿದ್ದರಿಂದ ಅದು ಪಲ್ಟಿಯಾಗಿದೆ

ಹೊಸಪೇಟೆ: ತಾಲ್ಲೂಕಿನ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಬ್ಯಾಟರಿಚಾಲಿತ ವಾಹನವೊಂದು ಮಂಗಳವಾರ ಪಲ್ಟಿಯಾಗಿ ಬಿದ್ದದ್ದರಿಂದ ಆರು ಜನ ಪ್ರವಾಸಿಗರು ಗಾಯಗೊಂಡಿದ್ದಾರೆ.

ವಿಜಯ ವಿಠಲ ದೇಗುಲದಿಂದ ಮರಳುವ ವೇಳೆ ಘಟನೆ ನಡೆದಿದೆ. ಗಾಯಗೊಂಡವರೆಲ್ಲರೂ ಆಂಧ್ರ ಪ್ರದೇಶದವರಾಗಿದ್ದಾರೆ. ಗಾಯಾಳುಗಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವಿಠಲ ದೇವಸ್ಥಾನದಿಂದ ಮುಖ್ಯರಸ್ತೆಯವರೆಗೆ ಹೋಗಲು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಈ ಬ್ಯಾಟರಿ ವಾಹನಗಳ ವ್ಯವಸ್ಥೆ ಮಾಡಿದೆ. ವಿಠಲ ದೇಗುಲ ಸಂರಕ್ಷಿತ ಸ್ಮಾರಕವಾಗಿದ್ದು, ಹೊಗೆಯಿಂದ ಸ್ಮಾರಕಗಳು ಕಳೆಗುಂದದಿರಲೆಂದು ಪ್ರಾಧಿಕಾರವು ಪ್ರವಾಸಿಗರಿಗೆ ಬ್ಯಾಟರಿ ವಾಹನಗಳ ವ್ಯವಸ್ಥೆ ಮಾಡಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲ. ಬ್ಯಾಟರಿ ವಾಹನದ ಟೈರ್‌ಗಳು ಸವೆದು ಹೋಗಿದ್ದರಿಂದ ಅದು ಪಲ್ಟಿಯಾಗಿದೆ.

ಒಟ್ಟು 25 ಬ್ಯಾಟರಿ ವಾಹನಗಳಿದ್ದು, ಅದರಲ್ಲಿ ಮೂರು ಮಾತ್ರ ನಿತ್ಯ ಸಂಚರಿಸುತ್ತಿವೆ. ಅವುಗಳ ಪರಿಸ್ಥಿತಿ ಸಹ ಸರಿಯಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು