ಹಂಪಿ ಕನ್ನಡ ವಿ.ವಿ.ಕುಲಸಚಿವರ ಬದಲಾವಣೆ; ಮಂಜುನಾಥ ಬೇವಿನಕಟ್ಟಿಗೆ ಜವಾಬ್ದಾರಿ

7

ಹಂಪಿ ಕನ್ನಡ ವಿ.ವಿ.ಕುಲಸಚಿವರ ಬದಲಾವಣೆ; ಮಂಜುನಾಥ ಬೇವಿನಕಟ್ಟಿಗೆ ಜವಾಬ್ದಾರಿ

Published:
Updated:

ಹೊಸಪೇಟೆ: ಎರಡು ತಿಂಗಳ ಹಿಂದೆಯಷ್ಟೇ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ಪಿ. ಮಹಾದೇವಯ್ಯನವರನ್ನು ಶನಿವಾರ ಹಠಾತ್ತಾಗಿ ಬದಲಿಸಿ ಪ್ರಾಧ್ಯಾಪಕ ಮಂಜುನಾಥ ಬೇವಿನಕಟ್ಟಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

‘ಆಡಳಿತದ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಅಗತ್ಯವಿರುವ ಕಾರಣ ಶನಿವಾರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಮಹಾದೇವಯ್ಯ ಅವರನ್ನು ಕುಲಸಚಿವರ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಜಾಗಕ್ಕೆ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮಂಜುನಾಥ ಬೇವಿನಕಟ್ಟಿ ಅವರನ್ನು ನೇಮಕ ಮಾಡಲಾಗಿದೆ’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೊ. ಡಿ. ಪಾಂಡುರಂಗಬಾಬು ಅವರು ಎರಡು ತಿಂಗಳ ಹಿಂದೆ ಕುಲಸಚಿವರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅದಾದ ನಂತರ ಮಹಾದೇವಯ್ಯನವರು ಅಧಿಕಾರ ವಹಿಸಿಕೊಂಡಿದ್ದರು. ಮೂರು ವರ್ಷಗಳಲ್ಲಿ ಮೂವರು ಕುಲಸಚಿವರನ್ನು ವಿ.ವಿ. ಕಂಡಿದಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !