ಮಂಗಳವಾರ, ನವೆಂಬರ್ 19, 2019
23 °C

ಹಂಪಿ ಸ್ಮಾರಕಕ್ಕೆ ಹಾನಿ; ಒಬ್ಬ ವಶಕ್ಕೆ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಹಂಪಿ ವಿಜಯ ವಿಠಲ ದೇವಸ್ಥಾನ ಹಿಂಭಾಗದ ಸಾಲುಗಂಬ ಕೆಡವಿ ಹಾನಿಗೊಳಿಸಿದ ಬೆಂಗಳೂರಿನ ನಾಗರಾಜ (45) ಎಂಬುವರನ್ನು ಪೊಲೀಸರು ಬುಧವಾರ ಸಂಜೆ ವಶಕ್ಕೆ ತೆಗೆದುಕೊಂಡಿದ್ದಾರೆ.

‘ನಾಗರಾಜ ಬೆಂಗಳೂರಿನಿಂದ ಹಂಪಿ ನೋಡಲು ಬಂದಿದ್ದರು. ಬುಧವಾರ ಹಂಪಿಯಲ್ಲಿ ಸುತ್ತಾಡುವಾಗ ಸಾಲುಗಂಬವೊಂದನ್ನು ತಳ್ಳಿ ಹಾನಿ ಮಾಡಿದ್ದಾರೆ. ಈ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳು ಠಾಣೆಗೆ ದೂರು ಕೊಟ್ಟಿದ್ದರಿಂದ ನಾಗರಾಜ ಅವನನ್ನು ವಶಕ್ಕೆ ಪಡೆಯಲಾಗಿದೆ. ಸ್ಮಾರಕಗಳ ಮಹತ್ವ ಗೊತ್ತಿಲ್ಲದೆ ನಾಗರಾಜ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದು ಹಂಪಿ ಡಿ.ವೈ.ಎಸ್ಪಿ. ಸಿಮಿ ಮರಿಯಮ್‌ ಜಾರ್ಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಂಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರಾತತ್ವ ಇಲಾಖೆ ಹಾಗೂ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)